

ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ಗಳಲ್ಲಿ ಮಾದಕವಾಗಿ ಕಾಣಿಸಿಕೊಂಡ ಪಾಕಿಸ್ತಾನದ ಹಾಟ್ ಹುಡುಗಿ ವೀಣಾ ಮಲ್ಲಿಕ್ ಬಾಲಿವುಡ್ನಲ್ಲಿ ಮತ್ತೊಮ್ಮೆ 'ತುಟಿ ಚುಂಬನ'ದ ಬಿಸಿ ಏರಿಸಲಿದ್ದಾರೆ. ಶೂಟಿಂಗ್ ಮುಗಿಸಿರುವ 'ಸೂಪರ್ ಮಾಡೆಲ್'ನಲ್ಲಿ ಈಕೆ ಅಶ್ಮಿತ್ ಪಟೇಲ್ ಜತೆ ಲಿಪ್ಲಾಕ್ ಮಾಡಿದ್ದಾಳೆ. ವೀಣಾ-ಆಶ್ಮಿತ್ ಇಬ್ಬರೂ ಬಿಗ್ಬಾಸ್ ಸೀಸನ್ 4ರಲ್ಲಿ ಜತೆಯಾಗಿದ್ದರು. ನಂತರ ಮನಸ್ತಾಪ ಮಾಡಿಕೊಂಡು ಬೇರ್ಪಟ್ಟರು. ಅದರ 'ಬಿಸಿ' ನಿದೇರ್ಶಕ ನವೀನ್ ಭಾತ್ರಾಗೆ ಚೆನ್ನಾಗಿಯೇ ತಟ್ಟಿದೆ. ಅಧರಗಳಿಗೆ ಮುತ್ತಿಕ್ಕಲು ಮೊದಮೊದಲು ಇಬ್ಬರೂ ಹಿಂದೇಟು ಹಾಕಿದರಂತೆ. ಪ್ರಣಯ ದೃಶ್ಯಗಳಲ್ಲೂ ಅರೆಮನಸ್ಸಿನಿಂದಲೇ ಭಾಗವಹಿಸುತ್ತಿದ್ದರಂತೆ. 'ನಿಮ್ಮ ಹಳೆ ದ್ವೇಷ ಸೆಟ್ನಿಂದ ಆಚೆ ಇರಲಿ' ಎಂದು ಡೈರೆಕ್ಟರ್ ಸಾಹೇಬರು ಬುದ್ಧಿ ಹೇಳಿದ ಮೇಲೆ ಇಬ್ಬರೂ ಇಂಥ ದೃಶ್ಯಗಳಲ್ಲಿ ತನ್ಮಯತೆಯಿಂದ ಪಾಲ್ಗೊಂಡರಂತೆ.