

'ರೋಜಾ' ಖ್ಯಾತಿಯ 'ಜಂಟಲ್ಮನ್' ಚೆಲುವೆ ಮಧೂ ಈಗೇನು ಮಾಡುತ್ತಿದ್ದಾಳೆ? ಕನ್ನಡದ 'ಅಣ್ಣಯ್ಯ' ಮತ್ತು 'ಟೈಮ್ಬಾಂಬ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಪಂಚಭಾಷಾ ತಾರೆಗೆ ಚಿತ್ರೋದ್ಯಮದಲ್ಲಿ ಅವಕಾಶಗಳು ಕಡಿಮೆ ಆಗಿವೆ. ತಮಿಳಿನ 'ಒತ್ತಕಲ್ಲು' ಮತ್ತು ತೆಲುಗಿನ 'ಅಂತಾಕು ಮುಂದು ಆ ತರುವಾಥಾ' ಬಿಟ್ಟರೆ ಅವಳ ಕೈಯ್ಯಲ್ಲಿ ಸದ್ಯಕ್ಕೆ ಚಿತ್ರಗಳಿಲ್ಲ. ಅದಕ್ಕೇ ಆಕೆ ರಂಗಭೂಮಿಯತ್ತ ಹೊರಳಿದ್ದಾಳೆ. ದಿವ್ಯಾ ಪಾಲತ್ ನಿರ್ದೇಶನದ 'ದಿ ವರ್ಡಿಕ್ಟ್' ನಾಟಕದಲ್ಲಿ ಕಾಣಿಸಿಕೊಂಡಿದ್ದಾಳೆ. 'ರಂಗಭೂಮಿಗೆ ಬಂದಿದ್ದು ಹಣ ಮಾಡಲು ಅಲ್ಲ, ಆತ್ಮತೃಪ್ತಿಗಾಗಿ. ಇಲ್ಲಿ ಕಲಾವಿದ ತನ್ನ ಪೂರ್ಣ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ನಾಸಿರುದ್ದೀನ್ ಶಾ ಅಂಥವರೇ ಈಗಲೂ ರಂಗಭೂಮಿಯಲ್ಲಿ ಸಕ್ರಿಯಲಾಗಿಲ್ಲವೆ' ಎಂದು ನಗುವರಳಿಸುತ್ತಾಳೆ ಮಧೂ.