ಮಣಿಯದ ಜಾನ್

ಭಾರತದಲ್ಲಿ ಸಮಕಾಲೀನ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಚಿತ್ರೀಕರಣ ಮುಗಿಯುವವರೆಗೆ...
ಮಣಿಯದ ಜಾನ್
Updated on: 

ಭಾರತದಲ್ಲಿ ಸಮಕಾಲೀನ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಚಿತ್ರೀಕರಣ ಮುಗಿಯುವವರೆಗೆ ಕಾದು, ಬಿಡುಗಡೆ ಹೊತ್ತಿನಲ್ಲಿ 'ನಮಗೆ ಅವಮಾನವಾಗಿದೆ, ನಮ್ಮ ಸಮಾಜದವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ' ಇತ್ಯಾದಿ ನೆಪಗಳನ್ನು ಇಟ್ಟುಕೊಂಡು ರಿಲೀಸ್‌ಗೆ ಅಡ್ಡಗಾಲು ಹಾಕುವ ಸಂಪ್ರದಾಯ ನಮ್ಮಲ್ಲಿ ಇತ್ತೀಚೆಗೆ ಬೆಳೆಯುತ್ತಿದೆ. ಸಿನಿಮಾವನ್ನೇ ನೋಡಿರುವುದಿಲ್ಲ. ಊಹೆಗಳ ಆಧಾರದಲ್ಲೇ ಪ್ರತಿಭಟನೆ! ಜಾನ್ ಅಬ್ರಹಾಂಗೂ ಅಂಥ ಅನುಭವ ಆಗಿದೆ. ಶ್ರೀಲಂಕಾ ನಾಗರಿಕ ಕದನದ ಕಥೆಯುಳ್ಳ 'ಮದ್ರಾಸ್ ಕೆಫೆ' ವಿರುದ್ಧ ತಮಿಳರು ಕ್ಯಾತೆ ತೆಗೆದರು. ಬಿಡುಗಡೆಗೆ ಮುನ್ನ ತಮಗೆ ಚಿತ್ರ ತೋರಿಸುವಂತೆ ಪಟ್ಟು ಹಿಡಿದರು. ಹೀರೋ ಕಮ್ ಪ್ರೊಡ್ಯೂಸರ್ ಜಾನ್ ಅಬ್ರಹಾಂ ಅದಕ್ಕೆ ಸೊಪ್ಪು ಹಾಕಲಿಲ್ಲ. 'ಇಂಥ ಧಮ್ಕಿ ನನ್ನ ಬಳಿ ನಡೆಯಲ್ಲ' ಎಂದ ಆತ, ಪ್ರತಿಭಟನಾಕಾರರಿಗೆ ಚಿತ್ರವನ್ನು ತೋರಿಸಲಿಲ್ಲ. ಮಾತ್ರವಲ್ಲ, ಈ ಚಿತ್ರ ನಿಷೇಧಿಸಿದ ತಮಿಳುನಾಡು ಹೊರತುಪಡಿಸಿ ದೇಶದ ಇತರ ರಾಜ್ಯಗಳಲ್ಲಿ ಕಳೆದ ಶುಕ್ರವಾರ ಬಿಡುಗಡೆ ಮಾಡಿದ. 'ಮದ್ರಾಸ್ ಕೆಫೆ'ಯ ಅದ್ಧೂರಿ ಮೇಕಿಂಗ್ ಬಗ್ಗೆ ಒಳ್ಳೆ ಮಾತುಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com