ಸ್ಟಾರ್ ನಾನಲ್ಲ; ಹೋಲಿಕೆ ಸಲ್ಲ

'ಇಬ್ಬರು ನಟರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅದೇ ಇಬ್ಬರು ಸ್ಟಾರ್‌ಗಳನ್ನು ಹೋಲಿಕೆ ಮಾಡಿದರೆ ತಪ್ಪಲ್ಲ' ಎಂದು...
ಸ್ಟಾರ್ ನಾನಲ್ಲ; ಹೋಲಿಕೆ ಸಲ್ಲ
Updated on: 

'ಇಬ್ಬರು ನಟರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅದೇ ಇಬ್ಬರು ಸ್ಟಾರ್‌ಗಳನ್ನು ಹೋಲಿಕೆ ಮಾಡಿದರೆ ತಪ್ಪಲ್ಲ' ಎಂದು ಹೇಳಿರುವಾತ ಸುಶಾಂತ್ ಸಿಂಗ್. ಬಾಲಿವುಡ್‌ನ ಉದಯೋನ್ಮುಖ ಹೀರೋ. ಮೊದಲ ಸಿನಿಮಾ 'ಕೈ ಪೋ ಚೆ' ತಕ್ಕಮಟ್ಟಿಗೆ ಹೆಸರು ಮಾಡಿದೆ. ಬಿಡುಗಡೆಗೆ ಸಿದ್ಧವಾಗಿರುವ ಎರಡನೇ ಚಿತ್ರ 'ಶುದ್ಧ್ ದೇಸಿ ರೋಮ್ಯಾನ್ಸ್‌' ನಿರೀಕ್ಷೆ ಹುಟ್ಟಿಸಿದೆ. 'ನಟನೆಯೇ ಬೇರೆ, ಸ್ಟಾರ್‌ಗಿರಿಯೇ ಬೇರೆ. ನನಗಂತೂ ಸ್ಟಾರ್ ಆಗುವ ಇರಾದೆ ಇಲ್ಲ. ಬಾಲಿವುಡ್‌ನಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನಾಳೆ ನನ್ನ ಸಿನಿಮಾಗಳು ಹಿಟ್ ಆಗದಿದ್ದರೂ ತಲೆಬಿಸಿ ಮಾಡಿಕೊಳ್ಳುವವ ನಾನಲ್ಲ. ರಂಗಭೂಮಿ ಇದ್ದೇ ಇದೆ' ಎಂದು ವಾಸ್ತವದ ಮಾತುಗಳನ್ನೇ ಆಡಿದ್ದಾನೆ ಸಿಂಗ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com