ನಾನು ಈಗಲೂ ವರ್ಜಿನ್...

ನಾನು ಈಗಲೂ ವರ್ಜಿನ್...
Updated on: 

ನಾನೋಬ್ಬ ಅಪ್ಪಟ ಬ್ರಹ್ಮಾಚಾರಿ ಹೀಗೆಂದವರು ಬಾಲಿವುಡ್ ಬ್ಲಾಕ್ ಬಸ್ಟರ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್. ಹಿಂದಿಯ ಖಾಸಗಿ ಟಿವಿ ಚಾನಲ್‌ನಲ್ಲಿ ನಡೆದ ಸೆಲೆಬ್ರಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತನ್ನ ರೋಮ್ಯಾಂಟಿಕ್ ಜೀವನದ ರಸಗಳಿಗೆಗಳನ್ನು ಬಿಚ್ಚಿಟ್ಟರು. ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಲ್ಮಾನ್, ಯಾರ್ ನಂಬ್ತಾರೋ  ಬಿಡ್ತಾರೋ, ಆದ್ರೆ ನಾನಂತೂ ಈವರೆಗೆ ಯಾವುದೇ ಗರ್ಲ್‌ಫ್ರೆಂಡ್ ಜೊತೆ ಸೆಕ್ಸ್‌ನಲ್ಲಿ ಭಾಗಿಯಾಗಿಲ್ಲ. ನಾನು ಅಪ್ಪಟ ವರ್ಜಿನ್, ನಾನು ಮದುವೆಯಾಗುವವಳಿಗೆ ಮಾತ್ರ ನನ್ನ ದೇಹ ಮೀಸಲು ಎಂದು ನುಲಿದಿದ್ದಾರೆ. ಇಷ್ಟೇ ಅಲ್ಲದೆ, ಆರಂಭದಲ್ಲಿ ನಟಿ, ಮಾಡೆಲ್ ಸಂಗೀತಾ ಬಿಜಲಾನಿಯನ್ನು ಮದುವೆಯಾಗಲು ನಿಶ್ಚಯವಾಗಿತ್ತು. ಮದುವೆ ಕಾರ್ಡ್‌ಗಳೂ ಮುದ್ರಣಗೊಂಡಿದ್ದವು. ಆದರೆ, ಅವಳು ನನಗೆ ವಂಚಿಸಿರುವುದು ಬಹಿರಂಗವಾದಾಗ ಅವಳನ್ನು ನಾನೇ ನಿರಾಕರಿಸಿದೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com