

ಪಾಕ್ ಮೂಲದ ಹಾಟ್ ನಟಿ ವೀಣಾ ಮಲ್ಲಿಕ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕನ್ನಡದ 'ಸಿಲ್ಕ್' ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಬಿಕಿನಿ ಉಡುಗೆಯಲ್ಲಿ ಕುಣಿದು ಪ್ರಚಾರ ಪಡೆದಿದ್ದರು. ಆದರೀಗ ಆಕೆಗೆ ಜ್ಞಾನೋದಯವಾದಂತೆ ಬಿಕನಿ ಬಗ್ಗೆ ವೈರಾಗ್ಯ ಮೂಡಿದೆಯಂತೆ. ಸದಾ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರ ಹೃದಯಕ್ಕೆ ಲಗ್ಗೆ ಇಟ್ಟಿದ್ದ ವೀಣಾ ಇನ್ನು ಮುಂದೆ ಬಿಕಿನಿ ತೊಡುವುದಿಲ್ಲ ಎಂದು ಶಪತಮಾಡಿದ್ದಾರಂತೆ. ಮುಂದಿನ ಚಿತ್ರ 'ಸೂಪರ್ ಮಾಡಲ್' ನಾನು ಬಿಕನಿ ತೊಟ್ಟಿರುವ ಕೊನೆಯ ಚಿತ್ರವಾಗಲಿದೆ ಎಂದಿದ್ದಾರಂತೆ. ಹಲವು ಬಿಕನಿಗಳನ್ನು ಚಿತ್ರಕ್ಕಾಗಿ ತೊಟ್ಟಿದ್ದೇನೆ. ಇಂತಹ ಉಡುಪುಗಳು ಬಾಲಿವುಡ್ಗೆ ಸರಿಹೊಂದುತ್ತದೆ. ಹೀಗಾಗಿ ಕನ್ನಡ ಚಿತ್ರಗಳಲ್ಲಿ ಟೂ-ಪೀಸ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಶಪತ ಮಾಡಿದ್ದಾರಂತೆ. ಈ ಹೇಳಿಕೆಯಿಂದ ಆಭಿಮಾನಿಗಳಿಗೆ ಬೇಸರವಾಗಿರುವುದಂತೂ ಸತ್ಯ.