

ಇತ್ತೀಚೆಗಷ್ಟೇ ಟಾಪ್ ಸೆಕ್ಸಿ ನಟಿ ಎಂದು ಫಾರ್ಹಿಮ್ ಪ್ರತಿಕೆಯಿಂದ ಕರೆಯಿಸಿಕೊಂಡಿದ್ದ ಕತ್ರಿನಾ ಕೈಫ್. ಈಗ ವಾರ ಪತ್ರಿಕೆಗಳ ಸಮೀಕ್ಷೆಯಲ್ಲೂ ನಂ.1 ಆಗಿ ಹೊರಹೊಮ್ಮಿದ್ದಾರೆ. ಪ್ರಿಯಾಂಕ ಚೋಪ್ರ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಏಷ್ಯಾದ ನಂ.1 ಸೆಕ್ಸಿ ನಟಿ ಎಂಬ ಕಿರೀಟ ಧರಿಸಿದ್ದಾಳೆ. ಸತತ ನಾಲ್ಕನೇ ಬಾರಿಗೆ ಕೈಫ್ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ. ಪ್ರಿಯಾಂಕಾಳ ನಂತರದ ಸ್ಥಾನದಲ್ಲಿ ಕಿರುತೆರೆ ನಟಿ ದ್ರಷ್ಟಿ ದಾಮಿ, ದೀಪಿಕಾ ಪಡುಕೊಣೆ ಇದ್ದಾರೆ. ಸದ್ಯಕ್ಕೆ ಧೂಮ್ 3 ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರು ಕೈಫ್, ರಣಬೀರ್ ಕಪೂರ್ ಜತೆಯಲ್ಲಿ ಬೀಚ್ನಲ್ಲಿ ಫೋಟೊಗಳು ಎಲ್ಲೆಡೆ ಹರಿದಾಡಿ ಸುದ್ದಿಯಲ್ಲಿದ್ದರು. ಈ ಬಾರಿಯ ಮತ್ತೊಂದು ಅಚ್ಚರಿ ಎಂದರೆ, ಕಿರುತೆರೆ ನಟಿ ಧಾಮಿ. ಧಾಮಿ ಟಾಪ್ 3ರಲ್ಲಿ ಸ್ಥಾನ ಗಿಟ್ಟಿಸಿದ್ದರೆ, ಆಕೆಯ ಗೆಳತಿ ಸನಾಯಾ ಇರಾನಿ ಟಾಪ್ 10ರೊಳಗೆ ಎಂಟ್ರಿ ಕೊಟ್ಟಿದ್ದು. 2008ರಲ್ಲಿ 4ನೇ ಸ್ಥಾನದಲ್ಲಿದ್ದ ಪ್ರಿಯಾಂಕಾ ಕ್ರಿಶ್3 ಯಶಸ್ಸಿನ ನಂತರ 2ನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದಿ ಕರೀನಾ ಕಪೂರ್ 5ನೇ ಸ್ಥಾನಕ್ಕೆ ಇಳಿದಿದ್ದಾರೆ. 6ನೇ ಸ್ಥಾನದಲ್ಲಿ ಬಿಪಾಶಾ ಬಸು ಇದ್ದಾರೆ.