

ಆಶಿಕಿ 2 ಹಿಟ್ ಜೋಡಿ ಆದಿತ್ಯಾ ಕಪೂರ್ ಮತ್ತು ಶ್ರದ್ಧಾ ಕಪೂರ್ ಇಂದಿಗೂ ಒಳ್ಳೆಯ ಗೆಳೆಯರೆಂದೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಆದಿತ್ಯಾರನ್ನು ಗಮನಿಸಿರುವ ಬಾಲಿವುಡ್ ಮಂದಿ ಇವರು ಲವರ್ಸ್ ಎಂದೇ ಬಿಂಬಿಸುತ್ತಿದ್ದಾರೆ. ಕಾರಣ ಇಷ್ಟೆ, ಆದಿತ್ಯಾರ ಸಂಕುಚಿತ ಸ್ವಭಾವ. ಯಾರಾದರೂ ಶ್ರದ್ಧಾ ಕಪೂರ್ಗೆ ಹತ್ತಿರವಾಗಿ 50 ಮೀಟರ್ ವ್ಯಾಪ್ತಿಯಲ್ಲಿದ್ದರೂ ಮಾನಸಿಕವಾಗಿ ಒದ್ದಾಡುತ್ತಾರಂತೆ. ಕೆಲವರು ಈತ ಮತ್ತು ಶ್ರದ್ಧಾ ಮಧ್ಯೆ ಲವ್ ಇಲ್ಲ ಎನ್ನುತ್ತಾರೆ. 'ಒಂದು ವೇಳೆ ಲವ್ ಮಾಡುತ್ತಿದ್ದರೆ ಇಷ್ಟೊತ್ತಿಗೆ ಅವರೇ ಹೇಳಿರುತ್ತಿದ್ದರು' ಎಂಬುದು ಅವರ ನಂಬಿಕೆ. ಆಶಿಕಿ 2 ನೋಡಿದ ಮಂದಿ ಅವರಿಬ್ಬರು ನಿಜ ಜೀವನದಲ್ಲೂ ಲವರ್ಸ್ ಆಗಬೇಕೆಂದು ಬಯಸುತ್ತಿದ್ದಾರೆ. ಸಿನಿಮಾದಲ್ಲಾದ ದುರಂತ ಬೇಡ ಎಂಬುದು ಅವರ ಕೋರಿಕೆ. ಅಷ್ಟಕ್ಕೂ ಶ್ರದ್ಧಾ ಆದಿತ್ಯಾನ ಲವ್ ಮಾಡ್ತಿದಾರಾ ಎಂಬುದು ಕುತೂಹಲ ಮೂಡಿಸಿದೆ.