

ಕಾಮಸೂತ್ರ 3ಡಿಯಲ್ಲಿ ಕಿಚ್ಚು ಹತ್ತಿಸಿದ್ದ ಶರ್ಲಿನ್ ಚೋಪ್ರಾ ಈಗ ಬ್ಯಾಡ್ ಗರ್ಲ್. ಬ್ಯಾಡ್ ಗರ್ಲ್ ವಿಡಿಯೋದಿಂದಾಗಿ ಹೆಸರುವಾಸಿಯಾಗುತ್ತಿದ್ದಾಳೆ. ಪಡ್ಡೆ ಯುವಕರ ನಡುವೆ ಮೈ ಬಳುಕಿಸಿ ಸುದ್ದಿಯಾಗಿದ್ದಾಳೆ. ವಿಡಿಯೋದಲ್ಲಿ ಶರ್ಲಿನ್ ನೃತ್ಯ ರಸವತ್ತಾಗಿದೆಯಂತೆ. ಸ್ಮೋಕ್ ಮಾಡುವುದರಿಂದ ಹಿಡಿದು ತನ್ನನ್ನೇ ಬ್ಯಾಡ್ ಬಿಚ್ ಎಂದು ಬಿಂಬಿಸಿ ಹಾಡಿಕೊಳ್ಳುತ್ತ ಯುವಕರೆದೆ ನಡುಗಿಸಿದ್ದಾಳೆ. ಆದರೆ ಅದರ ಸಾಹಿತ್ಯದಲ್ಲಿ ಅಂತಹ ಉನ್ಮಾದದ ಸಾಲುಗಳಿಲ್ಲ. ಸಂಗೀತವೂ ಪುನರಾವರ್ತಿತ. ಅರೆಬೆತ್ತಲೆ ಯುವಕರ ನಡುವೆ ಮಾದಕ ಹೆಜ್ಜೆ ಹಾಕಿರುವ ದೃಶ್ಯ ವಿಡಿಯೋದಲ್ಲಿದೆ. ತೈಲಾವೃತ ದೇಹಗಳ ಮೇಲೆ ಕೈಯಾಡಿಸುವ ತೆವಲಿನ ಹುಡುಗಿಯಾಗಿ ಕಾಣಿಸಿದ್ದಾಳೆ. ಕಾಮಸೂತ್ರ 3ಡಿ ಚಿತ್ರ ಅಶ್ಲೀಲ ಎಂದು ಹಲವರು ಜರೆದಿದ್ದರು. ಅದು ಹಲವು ಪ್ರಶಸ್ತಿ ಬಾಚಿ ಬಾಯಿಮುಚ್ಚಿಸಿತ್ತು. ಆದರೆ ಶರ್ಲಿನ್ಳ ಈ ರೂಪ ನೋಡಿ ನಿಜಕ್ಕೂ ಬ್ಯಾಡ್ ಗರ್ಲ್ ಎನ್ನುತ್ತಿದ್ದಾರೆ ಮಂದಿ!!