ಮದ್ವೆ ಆದಮೇಲೂ ತಾನು ಮಸ್ತ್ ಬೋಲ್ಡ್ ಎಂದು ತೋರಿಸಿಕೊಳ್ಳುತ್ತಿದ್ದಾಳೆ ಕರೀನಾ ಕಪೂರ್ ಖಾನ್. ಇಮ್ರಾನ್ ಹಶ್ಮಿ ಎದುರು ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ಕರಣ್ ಜೋಹಾರ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ!
ಕರಣ್ ಜೋಹಾರ್ ಮತ್ತು ಏಕ್ತಾ ಕಪೂರ್ ಅವರ ಜಂಟಿ ನಿರ್ಮಾಣದ ಚಿತ್ರದಲ್ಲಿ ಕಿಸ್ಸಿಂಗ್ ಕಿಂಗ್ ಇಮ್ರಾನ್ ಹಶ್ಮಿ ಹೀರೋ. ನಿರ್ದೇಶನ ಅಕ್ಷಯ್ ರಾಯ್. ಪ್ರಕಾಶ್ ಝಾ ಅವರ 'ಸತ್ಯಾಗ್ರಹ', ಜೋಹಾರ್‌ನ 'ಗೋರಿ ತೇರಿ ಪ್ಯಾರ್ ಮೇನ್' ಶೂಟಿಂಗ್ ಮುಗಿದ ನಂತರ ಹಶ್ಮಿ ಜತೆಗಿನ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಕರೀನಾ ಹಾಜರಾಗಲಿದ್ದಾಳೆ. ಸದ್ಯ ವಿದ್ಯಾಬಾಲನ್ ಎದುರು 'ಘನ್‌ಚಕ್ಕರ್'ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಇಮ್ರಾನ್, ಸಾಲು ಸಾಲಾಗಿ ಬಾಲಿವುಡ್‌ನ ಪ್ರಧಾನ ನಾಯಕಿಯರ ಮೇಲೆ ಕಣ್ಣು ಹಾಕಿದ್ದಾನೆ!