ಕೆಲವು ನಟಿಯರು ಇರ್ತಾರೆ. ಸದ್ಯ ಯಾರೂ ತನಗೆ ಫಿಟ್ ಆಗ್ತಿಲ್ಲ ಅನ್ನೋವಾಗ ಮಾಜಿ ಬಾಯ್‌ಫ್ರೆಂಡ್‌ಗಳ ಲಿಸ್ಟಿನ ಮೇಲೆ ಅವರ ಕಣ್ಣು ಹೋಗುತ್ತೆ. ಹಾಗೆಯೇ ಆಗಿದೆ ಬಿಪಾಶಾ ಬಸು ಸ್ಥಿತಿ.
ಮೊನ್ನೆ ಮುಂಬೈನಲ್ಲಿ ಫಿಟ್ನೆಸ್ ಬ್ರ್ಯಾಂಡ್ ಒಂದರ ಕಾರ್ಯಕ್ರಮದಲ್ಲಿ ಅವಳು ಮಾಜಿ ಬಾಯ್‌ಫ್ರೆಂಡ್ ಡಿನೊ ಮೊರಿಯಾ ಜೊತೆ ಲವಲವಿಕೆಯಿಂದ ಕಾಣಿಸಿಕೊಂಡಿದ್ದಳು. ಆಗಾಗ್ಗೆ ಪರಸ್ಪರ ಕೈ- ಭುಜಗಳೂ ಟಚ್ ಆಗ್ತಿದ್ದರ ಬಗ್ಗೆ ಹಲವು ವಿಡಿಯೋಗಳು ಸಾಕ್ಷಿಯಾದವು. ಇದೇ ಟೈಮಲ್ಲಿ ಡಿನೊ ಕೂಡ ಸ್ಟೇಟ್‌ಮೆಂಟ್ ಕೊಟ್ರು, 'ಬಿಪಾಶಾ ಫಿಟ್ನೆಸ್‌ಗೆ ಹೆಸರಾದವಳು. ಅವಳ ಸೌಂದರ್ಯಕ್ಕೆ ಫಿಟ್ನೆಸ್ ನಿಜಕ್ಕೂ ಬೋನಸ್. ನನ್ಗೆ ಅವಳ ಫಿಟ್ನೆಸ್ ಇಷ್ಟ' ಅಂತ. ಇಬ್ಬರದ್ದೂ ಫಿಟ್ನೆಸ್ ಕೆಮಿಸ್ಟ್ರಿ. ಮತ್ತೆ ಹೊಸ ಗಾಳಿ ಬೀಸಲೂಬಹುದು. <