ರೇಪ್‌ಗೆ ಯಾರ್ ಹೆದರ್ತಾರೋ, ಇಲ್ವೋ. ಆದರೆ, ಸನ್ನಿ ಲಿಯೋನ್ ಮಾತ್ರ ಅದರ ಬಗ್ಗೆ ಮೃದುಧೋರಣೆ ಹೊಂದಿದ್ದಾಳೆ.
ಸನ್ನಿ ಪ್ರಕಾರ, ರೇಪ್ ಕ್ರೈಮ್ ಅಲ್ವಂತೆ. ಅದು ಅಚ್ಚರಿಯ ಸೆಕ್ಸ್ ಅಂತೆ. ಹಾಗಂತ ಅವಳು ತುಂಬಾ ಉದ್ರೇಕಕಾರಿಯಾಗಿಯೇ ಟ್ವೀಟ್ ಮಾಡಿದ್ದಳು. ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಖಾರ ಪ್ರತಿಕ್ರಿಯೆಗಳೂ ಬಂದವು. ಯಾಕೋ ವಾತಾವರಣ ಬಿಸಿಯಾಗುತ್ತಿದೆ ಅಂತ ಗೊತ್ತಾದ ಕೂಡಲೇ, ಆ ಟ್ವೀಟನ್ನು ಡಿಲೀಟ್ ಮಾಡಿದ್ದಾಳೆ. ಅಲ್ಲದೆ, ಪ್ರತಿಕ್ರಿಯಿಸಿದ ಅಷ್ಟೂ ಮಂದಿಗೆ, 'ನಾನು ಆ ಥರ ಹೇಳಿಕೆಯನ್ನು ಅಂಟಿಸಲೇ ಇಲ್ಲ. ಮರುಟ್ವೀಟ್ ಮಾಡುತ್ತಿರುವ ನೀವೆಲ್ಲ ಸುಮ್ಮನಿದ್ದರೆ ಸೈ ಇಲ್ಲಾ ಅಂದ್ರೆ ಅಕೌಂಟ್ ಬ್ಲಾಕ್ ಆಗುತ್ತೆ' ಅಂತೆಲ್ಲ ಹೆದರಿಸಿದ್ದಾಳೆ.
ಅವಳೇನೇ ಸಬೂಬು ಹೇಳಲಿ,ಮನಸ್ಸು ಮೊದಲು ಹೊರ ಹಾಕಿದ್ದೇ ಸತ್ಯ!