ಕೆಲವು ನಟೀಮಣಿಯರಿರುತ್ತಾರೆ. ಸ್ವಲ್ಪ ಹೆಸರು ಬಂದರೆ ಸಾಕು, ಬಹುತಾರಾಗಣದ ಚಿತ್ರಗಳಲ್ಲಿ ನಟಿಸಲು ಒಪ್ಪುವುದೇ ಇಲ್ಲ. ಕೃಷ್ಣ ಸುಂದರಿ ರಾಣಿ ಮುಖರ್ಜಿಗೆ ಇಂತಹ ಸಿನಿಮಾಗಳಲ್ಲಿ ನಟಿಸುವುದಕ್ಕೆ ಯಾವ ಆಕ್ಷೇಪವೂ ಇಲ್ಲ. 'ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಫನ್ ಇರುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಪಿಕ್ನಿಕ್ ಅನುಭವ ಕೊಡುತ್ತದೆ' ಎನ್ನುವುದು ರಾಣಿ ಮಾತು. ಈಕೆಯ ಲೇಟೆಸ್ಟ್ ಸಿನಿಮಾ ಆಮೀರ್ ಖಾನ್ರ 'ತಲಾಶ್'ನಲ್ಲಿ ಕರೀನಾ ಕಪೂರ್ ಕೂಡ ಪ್ರಮುಖ ಪಾತ್ರಗದಲ್ಲಿ ಕಾಣಿಸಿಕೊಂಡಿದ್ದರು.
ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಲ್ಲಿ ನಟಿಸುವುದನ್ನು ಇಷ್ಟಪಡುವ ರಾಣಿಯ ಮತ್ತೊಂದು ವಿಶೇಷ ಎಂದರೆ, ಈಕೆ ತಾನು ನಟಿಸಿರುವ ಚಿತ್ರಗಳನ್ನು ನೋಡುವುದೇ ಇಲ್ಲವಂತೆ!