

ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ಎಡವಟ್ಟು ಮಾಡಿಕೊಂಡಿದ್ದಾಳೆ. ಗಾಯಕ ಕೇನ್ ಸೆಟ್ ಜತೆ ಡೇಟಿಂಗ್ನಲ್ಲಿದ್ದಾಗ ಉನ್ಮಾದದ ಘಳಿಗೆಯೊಂದರಲ್ಲಿ ಮೈಮರೆತಿದ್ದಾರೆ. ಪರಿಣಾಮ ಆಕೆಯ ಗರ್ಭದಲ್ಲಿ ಹೊಸ ಜೀವವೊಂದು ಕುಡಿಯೊಡೆದಿದೆ. ಈಗಾಕೆ ಮೂರು ತಿಂಗಳ ಗರ್ಭಿಣಿ. ಶೀಘ್ರ ಮದುವೆ ಮಾಡಿಕೊಳ್ಳಬೇಕು ಎಂದು ಇಬ್ಬರೂ ಆಲೋಚಿಸುತ್ತಿದ್ದಾರಂತೆ. 'ಇನ್ನಾರು ತಿಂಗಳು ಕಳೆಯಲಿ ಬಿಡಿ. ಮಗುವೂ ನಿಮ್ಮ ವಿವಾಹಕ್ಕೆ ಸಾಕ್ಷಿಯ.ಾಗುತ್ತದೆ' ಎಂದು ಕಿಮ್ ವಿರೋಧಿಗಳು ಕುಹಕವಾಡುತ್ತಿದ್ದಾರೆ ಎನ್ನುವುದು ಸುಳ್ಳಿದ್ದೀತು. ಕಿಮ್ಗಿದು ಎರಡನೇ ಮದುವೆ. ಫುಟ್ಬಾಲ್ ಪಟು ಕ್ರಿಸ್ ಹಂಪ್ರೆಸ್ ಜತೆಗಿನ ದಾಂಪತ್ಯ 72 ದಿನಗಳಲ್ಲೇ ಮುರಿದು ಬಿದ್ದಿತ್ತು. ಆ ನಂತರವೇ ಆಕೆ ಕೇನ್ ತೋಳ್ತೆಕ್ಕೆ ಸೇರಿದ್ದು.