ಪ್ರಾಚಿ ದೇಸಾಯಿಯಂತೆ 'ಘಜನಿ' ಚೆಲುವೆ ಆಸಿನ್ದೂ ಅದೇ ಸಮಸ್ಯೆ. ತನ್ನ ವಯಸ್ಸಿಗೆ ಸಹಜ ಅನ್ನಿಸುವ ಪಾತ್ರಗಳು, ತನ್ನ ವಯೋವಾನದ ಹೀರೋಗಳೊಂದಿಗೆ ನಟಿಸುವ ಅವಕಾಶ ಸಿಗುತ್ತಿಲ್ಲ ಅನ್ನುವುದು ಅವಳ ಕೊರಗು. 'ಹೊಸಬರೊಂದಿಗೆ ಕೆಲಸ ಮಾಡಲು ತಯಾರಿದ್ದೇನೆ' ಎಂದು ಆಕೆ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.
'ಘಜನಿ' ಬಳಿಕ ಬಾಲಿವುಡ್ನಿಂದ ಆಫರ್ಗಳ ಸುರುಮಳೆ ಬಂತು. ಬಾಲಿವುಡ್ಗೆ ನಾನು ಹೊಸಬಳಾಗಿದ್ದೆ. ಹೀಗಾಗಿ ದೊಡ್ಡ ಬ್ಯಾನರ್ಗಳು, 'ಖಾನ್' ಮತ್ತು 'ಕುಮಾರ್' ಜತೆ ನಟಿಸಲು ಆದ್ಯತೆ ನೀಡುವಂತೆ ಕೆಲವರು ಸಲಹೆ ಮಾಡಿದರು. ಅದರಂತೆ ನಡೆದುಕೊಂಡೆ. 100 ಕೋಟಿ ರುಪಾಯಿ ಕ್ಲಬ್ಗೆ ಸೇರ್ಪಡೆಯೂ ಆದೆ. ಆದರೆ ನನ್ನ ವಯೋವಾನದವರೊಂದಿಗೆ ಕೆಲಸ ಮಾಡುವ ಅವಕಾಶ ಸಿಗಲೇ ಇಲ್ಲ. ಅಂತಹ ಅವಕಾಶ ಸಿಕ್ಕರೆ ಒಪ್ಪಿಕೊಳ್ಳಲು ಸಿದ್ಧಳಿದ್ದೇನೆ ಎಂದು ಆಸಿನ್ ಅಂತರಂಗ ಬಿಚ್ಚಿಟ್ಟಿದ್ದಾಳೆ. <