ಮೋನಿಕಾ ಬೇಡಿ ನಿಜಕ್ಕೂ ಖುಷಿಯಲ್ಲಿದ್ದಾಳೆ. ಸಂಜಯ ಲೀಲಾ ಭನ್ಸಾಲಿಯ 'ಸರಸ್ವತಿಚಂದ್ರ'ದಲ್ಲಿ ಮುಖ್ಯಪಾತ್ರ ಈಕೆಗೆ ಸಿಕ್ಕಿದೆ. 'ಒಳ್ಳೆಯ ಪಾತ್ರ, ಒಳ್ಳೆಯ ಬ್ಯಾನರ್ ಮತ್ತು ಸರಿಯಾದ ಅವಕಾಶಕ್ಕೆ ಕಾಯುತ್ತಿದ್ದೆ. ಕಾದದ್ದು ಸಾರ್ಥಕವಾಗಿದೆ' ಎಂದಿದ್ದಾಳೆ ಸುಂದರಿ. ಅವಳ ಪಾಲಿಗೆ ಕಿರುತೆರೆಯೇ ಅದೃಷ್ಟದ ಹೆಬ್ಬಾಗಿಲು. ಭೂಗತಲೋಕದ ಪಾತಕಿ ಅಬು ಸಲೇಂ ಜತೆಗಿನ ಸಖ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದವಳಿಗೆ ಮರುಜನ್ಮ ನೀಡಿದ್ದೂ ಕಿರುತೆರೆಯೇ. 'ಬಿಗ್ ಬಾಸ್' ರಿಯಾಲಿಟಿ ಶೋ ಅವಳ ರೀ ಎಂಟ್ರಿಗೆ ಹಾದಿ ಮಾಡಿಕೊಟ್ಟಿತ್ತು. ಈಗ ಮೆಗಾ ಧಾರಾವಾಹಿ. 'ಕಿರುತೆರೆಯ ಋಣ ಮರೆಯಲಾರೆ. ನಾನು 25 ಸಿನಿಮಾಗಳಿಂದ ಮಾಡಲು ಅಸಾಧ್ಯವಾದದ್ದು ಕಿರುತೆರೆಯಿಂದ ಸಾಧ್ಯವಾಗಿದೆ' ಎನ್ನುವುದು ಮೋನಿಕಾ ಮಾತು.