ಬಣ್ಣದ ಲೋಕದಲ್ಲಿ ಘಟಾನುಘಟಿ ನಾಯಕರ ಇನ್ನಿಂಗ್ಸ್ ಮುಗಿದ ಮೇಲೆ ಅವರ ಮಕ್ಕಳದ್ದೇ ಆಳ್ವಿಕೆ! ಇದಕ್ಕೆ ಸಾಕ್ಷಿ 'ಅತಿಯಾ ಶೆಟ್ಟಿ'.
ಯಾರೀ ಅತಿಯಾ ಶೆಟ್ಟಿ? ಸುನೀಲ್ ಶೆಟ್ಟಿ ಮಗಳು! ಹೌದು, ಅತಿಯಾ ಈಗ ಬಾಲಿವುಡ್‌ನಲ್ಲಿ ಮೊದಲನೇ ಹೆಜ್ಜೆಯೂರುತ್ತಿದ್ದಾಳೆ. ವಿಶೇಷವೆಂದರೆ, ಈಕೆ ನಾಯಕಿಯಾಗಿರುವ ಚಿತ್ರದಲ್ಲೇ ಜಾಕಿಶ್ರಾಫ್‌ನ ಮಗ ಟೈಗರ್‌ಶ್ರಾಫ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾನೆ!
ಅದೇನೇ ಇರಲಿ, ಇಷ್ಟು ದಿನ ಅತಿಯಾ ಎಲ್ಲಿದ್ದಳು? ನ್ಯೂಯಾರ್ಕಿನಲ್ಲಂತೆ. ಅಲ್ಲಿನ ಫಿಲ್ಮ್ ಅಕಾಡೆಮಿಯಲ್ಲಿ ನಟನೆಯ ಪಾಠ ಹೇಳಿಸಿಕೊಂಡು, ಈಗಷ್ಟೇ ಮುಂಬೈಗೆ ಲ್ಯಾಂಡ್ ಆಗಿದ್ದಾಳೆ ಅತಿಯಾ. ಅಲ್ಲದೆ, ಹಿಂದಿಯನ್ನೂ ಗಟ್ಟಿ ಮಾಡಿಕೊಳ್ತಿದ್ದಾಳೆ. ಹೊಸ ವರ್ಷದಲ್ಲಿನ ಈ ಹೊಸಮುಖಕ್ಕೆ ನಾವೂ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?