ತೆಲುಗಿನಿಂದ ಹಿಂದಿಗೆ 'ಪಾರ್ಸೆಲ್' ಆದ 'ಹೈದರಾಬಾದ್ ಬಿರಿಯಾನಿ' ಇಲಿಯಾನಾ, ಇನ್ನೇನು ಸದ್ಯದಲ್ಲೇ ಫಾರಿನ್ನಿಗೆ 'ಪಾರ್ಸೆಲ್' ಆದ್ರೂ ಆಗಬಹುದು!
ಕಾರಣ, ಇಲಿಯಾನಾ ಲವ್ವಿಗೆ ಬಿದ್ದಿದ್ದಾಳೆ! ಅದೂ ದೇಸಿ ಹುಡುಗನೊಟ್ಟಿಗೆ ಅಲ್ಲ. ಆಸ್ಟ್ರೇಲಿಯನ್ ಫೋಟೋಗ್ರಾಫರ್ ಜೊತೆಗೆ. 'ಬರ್ಫಿ'ಯಲ್ಲಿ ಅದ್ಭುತ ನಟನೆ ತೋರಿದ್ದಕ್ಕೆ ಆಕೆ ಈಗ ಅನೇಕ ಅವಾರ್ಡ್ ಫಂಕ್ಷನ್‌ಗಳಿಗೆ ಭೇಟಿ ನೀಡುತ್ತಿದ್ದಾಳೆ. ಹೋದಲ್ಲೆಲ್ಲ ಆಕೆಯೊಂದಿಗೆ ಆಸ್ಟ್ರೇಲಿಯನ್ ಫೋಟೋಗ್ರಾಫರ್ ಆ್ಯಂಡ್ರ್ಯೂ ಇರುತ್ತಾನೆ. ಅತಿ ಕ್ಲೋಸಾಗಿಯೇ ಆಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾನಂತೆ. ಆದರೆ, ಈ ಸಂಬಂಧದ ಬಗ್ಗೆ ಇಲಿಯಾನಾ 'ಸದ್ಯ ಪ್ರತಿಕ್ರಿಯಿಸಲ್ಲ' ಅಂತಿದ್ದಾಳೆ.ಹಾಗಾದ್ರೆ ನಾವೇನಂತ ಕಲ್ಪಿಸಿಕೊಳ್ಬೇಕಪ್ಪಾ..!?