

ಕೇಟ್ ವಿನ್ಸ್ಲೆಟ್ ಎಂದರೆ ಯಾರು ಎಂದು ಕೇಳುವ ಸ್ಥಿತಿ ಇರುವುದು ನಿಜ. ಈಕೆ 'ಟೈಟಾನಿಕ್' ಚೆಲುವೆ. ಬಹುಶಃ 'ಟೈಟಾನಿಕ್' ಒಂದೇ ಅವಳಿಗೆ ಅತ್ಯಧಿಕ ಯಶಸ್ಸು ತಂದುಕೊಟ್ಟ ಚಿತ್ರ. ಆ ನಂತರ ಹಲವಾರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದರೂ ಅದೃಷ್ಟ ಅದೇಕೋ ಕೈ ಹಿಡಿಯಲಿಲ್ಲ. ಇರಲಿ ಬಿಡಿ, ವಿಷಯ ಅದಲ್ಲ. ತನ್ನ ಸ್ನಿಗ್ಧ ಚೆಲುವಿನಿಂದ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಕೊಂಡ ಕೇಟ್ಗೀಗ 37. ಅದು ಅವಳ ಮುಖದಲ್ಲೂ ಎದ್ದು ಕಾಣುತ್ತಿದೆ. ತ್ವಚೆ ಸುಕ್ಕುಗಟ್ಟಿರುವುದು ಕಾಣದಂತೆ ನೋಡಿಕೊಳ್ಳಲು ಸರ್ಜರಿ ಮಾಡಿಸಿಕೊಳ್ಳುವಂತೆ ಹಲವರು ಅವಳಿಗೆ ಸಲಹೆ ನೀಡಿದರಂತೆ. ಆದರೆ ಕೇಟ್ಗೆ ಅದು ಇಷ್ಟವಿಲ್ಲ. 'ನಾನು ಕೇವಲ ಸುಕ್ಕು ತಡೆಯುವ ನೈಸರ್ಗಿಕ ಕ್ರೀಮ್, ಜೆಲ್ಗಳನ್ನಷ್ಟೇ ಬಳಸುತ್ತೇನೆ. ಅವು ಉತ್ತಮ ಪರಿಣಾಮ ಬೀರುತ್ತವೆ' ಎಂದಿದ್ದಾಳೆ.