

'ಯೆ ಜವಾನಿ ಹೈ ದಿವಾನಿ'ಯಲ್ಲಿ ಮಾಧುರಿ ದೀಕ್ಷಿತ್ ಘಾಗ್ರಾ ಚೋಲಿ ತೊಟ್ಟು ಕುಣಿದ ಐಟಂ ಸಾಂಗ್ ಕ್ಲಿಕ್ ಆಗಿದ್ದೇ ತಡ, ಇನ್ನಷ್ಟು ಸಿನಿಮಾಗಳಲ್ಲಿ ಆಕೆ ಐಟಂ ಹಾಡಿಗೆ ಕುಣಿಯಲಿದ್ದಾಳೆ ಎನ್ನುವ ಗಾಸಿಪ್ ಬಿ ಟೌನ್ನಲ್ಲಿ ಜೋರಾಗಿಯೇ ಹರಡಿದೆ. ಸಂಜಯ್ ಲೀಲಾ ಬನ್ಸಾಲಿಯ 'ರಾಮ ಲೀಲಾ'ದಲ್ಲಿ ಮಾಧುರಿ ಐಟಂ ಹಾಡಿಗೆ ಒಪ್ಪಿಕೊಂಡಿದ್ದಾಳೆ ಎನ್ನುವ ಸುದ್ದಿ ಇತ್ತು. ಅದನ್ನು ಚಿತ್ರತಂಡ ಅಲ್ಲಗಳೆದಿದೆ. 'ಈ ಸುದ್ದಿ ಎಲ್ಲಿಂದ ಹೊರಟಿದೆಯೊ ಗೊತ್ತಿಲ್ಲ. ನಮ್ಮ ಸಿನಿಮಾದಲ್ಲಿ ಮಾಧುರಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಏಕೆಂದರೆ 'ರಾಮಲೀಲಾ'ದಲ್ಲಿ ಐಟಂ ಸಾಂಗ್ ಸೇರಿಸಲು ಅವಕಾಶವೇ ಇಲ್ಲ' ಎಂದಿದೆ ಚಿತ್ರತಂಡ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಎದುರು ದೀಪಿಕಾ ಪಡುಕೋಣೆ ನಾಯಕಿ.