

'ಡಿ-ಡೇ' ಬ್ಯೂಟಿ ಹುಮಾ ಖುರೇಷಿ ನಿಜ ಜೀವನದಲ್ಲಿ ಚೆಲ್ಲುಚೆಲ್ಲು ಹುಡುಗಿ. ಆದರೆ ಕೆಲಸದ ವಿಷಯಕ್ಕೆ ಮಾತ್ರ ಘನಗಂಭೀರೆ. ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವೆ ಅಂಥ ವ್ಯತ್ಯಾಸ ಕಾಪಾಡಿಕೊಂಡರೆ ಮಾತ್ರ ನಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರಗಳು ಸಿಕ್ಕರೂ ಸಲೀಸಾಗಿ ನಿರ್ವಹಿಸಬಹುದು ಎನ್ನುವುದು ಅವಳ ನುಡಿ. ನಟಿಯಾಗಬೇಕು ಎನ್ನುವುದು ಅವಳ ಬಾಲ್ಯದ ಆಸೆ. ಆದರೆ ಹೆತ್ತವರಿಗೆ ಮಗಳು ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಲಿ ಎನ್ನುವ ಹಂಬಲ.
'ನಾನು ನಟಿಯಾಗುತ್ತೇನೆ' ಎಂದಾಗ ಗೆಳತಿಯರು ಗೇಲಿ ಮಾಡಿದ್ದರಂತೆ. ಕೊನೆಗೆ ಬೆನ್ನೆಲುಬಾಗಿ ನಿಂತದ್ದು ಅಪ್ಪನೇ ಅಂತೆ. 'ಡಿ-ಡೇ'ಯಲ್ಲಿ ಆ್ಯಕ್ಷನ್ ಪಾತ್ರ ನೀಡಿದ್ದಕ್ಕೆ ನಿರ್ದೇಶಕ ನಿಖಿಲ್ ಅಡ್ವಾಣಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎನ್ನುತ್ತ ಚೆಂದದ ನಗೆ ಬೀರುತ್ತಾಳೆ ಹುಡುಗಿ.