

ಇನ್ನೇನು ಅಮೀಷಾ ಪಟೇಲ್ ನಟನಾ ಬದುಕು ಮುಗಿದೇ ಹೋಯಿತು ಎಂದು ಜನ ಅಂದುಕೊಳ್ಳುತ್ತಿರುವಾಗಲೇ ಅಮೀಷಾ ಹೊಸ ಸಾಹಸದೊಂದಿಗೆ ಪ್ರತ್ಯಕ್ಷಳಾಗಿದ್ದಾಳೆ. ಆಕೆ ದ್ವಿಪಾತ್ರದಲ್ಲಿ ನಟಿಸಿರುವುದಷ್ಟೇ ಅಲ್ಲದೇ, ನಿರ್ಮಾಪಕಿಯೂ ಆಗಿರುವ 'ದೇಸಿ ಮ್ಯಾಜಿಕ್' ಬಿಡುಗಡೆಗೆ ಸಿದ್ಧವಾಗಿದೆ. ಅವಳ ಪಾತ್ರಗಳು ತದ್ವಿರುದ್ಧ ವ್ಯಕ್ತಿತ್ವದವು. ಒಂದು ಮಾಡರ್ನ್ ಹುಡುಗಿ, ಇನ್ನೊಂದು ಅಪ್ಪಟ ಹಳ್ಳಿ ಹುಡುಗಿ. ನಿರ್ಮಾಣದಲ್ಲಿ ಕುನಾಲ್ ಗೂಮರ್ ಆಮೀಷಾಗೆ ಸಾಥ್ ನೀಡಿದ್ದು, ಚಿತ್ರಕಥೆಯನ್ನೂ ರಚಿಸಿದ್ದಾರೆ. 'ನಾನು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಐಡಿಯಾ ಕುನಾಲ್ದೇ. ನಿಜಕ್ಕೂ ಇದು ನನ್ನ ವೃತ್ತಿ ಬದುಕಿನಲ್ಲಿ ಸವಾಲಿನ ಸಿನಿಮಾ' ಎಂದಿದ್ದಾಳೆ ಅಮೀಷಾ.