

'ಸೌದಾಗರ್' ಚೆಲುವೆಯ ಮುಖದಲ್ಲಿ ಮತ್ತೆ ಮಂದಹಾಸ ಮಿನುಗಿದೆ. ಮನೀಷಾ ಕೊಯಿರಾಲಾ ಕ್ಯಾನ್ಸರ್ ವಿರುದ್ಧದ ಸಮರದಲ್ಲಿ ಗೆದ್ದಿದ್ದಾಳೆ. 42ರ ಪ್ರಾಯದ ನೇಪಾಳಿ ಸುಂದರಿಗೆ ಅಂಡಾಶಯ ಕ್ಯಾನ್ಸರ್ ಇರುವುದು ವರ್ಷದ ಹಿಂದೆ ಪತ್ತೆಯಾಗಿತ್ತು. ಅಮೆರಿಕದಲ್ಲಿ ಆರು ತಿಂಗಳ ಸತತ ಚಿಕಿತ್ಸೆ ಬಳಿಕ ಆಕೆ ಗುಣಮುಖಳಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಕೂಡ. 'ನನಗೀಗ ಕ್ಯಾನ್ಸರ್ ಇಲ್ಲ ಎಂಬುದಾಗಿ ವೈದ್ಯರು ಹೇಳಿದ್ದಾರೆ. ಅದನ್ನು ಕೇಳಿದಾಗ ಖುಷಿಯಿಂದ ಚೀರಾಡಿಬಿಟ್ಟೆ. ನನಗಿದು ಮರುಜನ್ಮ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ, ನನ್ನ ಜತೆಗೆ ನಿಂತು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ನಾನು ಹಿಂದಿನಂತಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯುತ್ತದೆ ಎನ್ನುವುದು ಗೊತ್ತಿದೆ. ನಿಮ್ಮೆಲ್ಲರ ಹಾರೈಕೆಯಿಂದ ಬಲದಿಂದ ಹಿಂದಿನ ಆರೋಗ್ಯ ಮತ್ತೆ ಗಳಿಸಿಕೊಳ್ಳಲು ಕಷ್ಟವಾಗದು' ಎಂದು ಮನೀಶಾ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾಳೆ. ನೀವೂ ಒಂದು ಬೆಸ್ಟ್ ಆಫ್ ಲಕ್ ಹೇಳಿಬಿಡಿ.