

ತನ್ನ ಚೊಚ್ಚಲ ಹಿಂದಿ ಸಿನಿಮಾ 'ನಶಾ' ಬಗ್ಗೆ ಪೂನಂ ಪಾಂಡೆ ಶುರುವಿನಿಂದಲೂ ನಶೆ ಏರಿಸುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಳು. ಆಕೆ ನಾಯಕನೊಂದಿಗೆ ಕಾಣಿಸಿಕೊಂಡ ಹಸಿಬಿಸಿ ದೃಶ್ಯಗಳ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಗೊಂಡು ಒಂದಷ್ಟು ಚರ್ಚೆಗಳೂ ಆದವೆನ್ನಿ. ಮಾದಕ ಸನ್ನಿವೇಶಗಳಿವೆ ಎಂಬುದನ್ನು ಖುದ್ದು ಪೂನಂ ಒಪ್ಪಿಕೊಂಡಿದ್ದಳು. ಆದರೆ ಅವೆಲ್ಲವನ್ನೂ ಮೀರಿಸುವ 'ನಶೆ' ಚಿತ್ರದಲ್ಲಿದೆ ಎನ್ನುವುದು ಮೊದಲ ಪೋಸ್ಟರ್‌ನಿಂದಲೇ ಗೊತ್ತಾಗಿದೆ. ಇದರಲ್ಲಿ ನೂಲೆಳೆಯನ್ನೂ ಇಟ್ಟುಕೊಳ್ಳದೆ ತನ್ನ ಮೈಮಾಟವನ್ನು ಪ್ರದರ್ಶಿಸಿರುವ ಪೂನಂ, ತನ್ನ ಖಾಸಗಿ ಭಾಗಗಳನ್ನು ಮಾತ್ರ ಪ್ಲೆಕಾರ್ಡ್‌ಗಳಿಂದ ಮುಚ್ಚಿಕೊಂಡಿದ್ದಾಳೆ. ಟ್ರೇಲರ್‌ನಲ್ಲೇ ಹೀಗೆ, ಇನ್ನು ಸಿನಿಮಾದಲ್ಲಿ ಏನೇನಿದೆಯೊ? ಹೇಳಿಕೇಳಿ 18ರ ತರುಣ, 25ರ ಯುವತಿಯ ನಡುವಿನ ಪ್ರೇಮದ ಕಥೆಯಂತೆ.