

ಗಾಳಿಸುದ್ದಿಯಿಲ್ಲದೆ ಬಾಲಿವುಡ್ನ ಗಾಲಿ ಮುಂದೋಡದು. ಈಗ ಈ ಗಾಲಿಗೆ ಸಿಲುಕಿದವಳು ನಟಿ ಸೋನಂ ಕಪೂರ್. ಸೋನಂಗೆ ಮೊನ್ನೆ ಬಂಧುಗಳು, ಸ್ನೇಹಿತರು, ಅಭಿಮಾನಿಗಳಿಂದ ವಿಪರೀತ ಫೋನ್ ಕಾಲ್ಗಳು ಬಂದವಂತೆ. ಎಲ್ಲರೂ ಆಕೆಗೆ ಹೇಳಿದ್ದು 'ಕಂಗ್ರ್ಯಾಟ್ಸ್' ಅಂತಲೇ. 'ಹಾಲಿವುಡ್ಗೆ ಸೋನಂ ಎಂಟ್ರಿ ಕೊಡ್ತಿದ್ದಾಳೆ' ಅನ್ನೋ ಸುದ್ದಿಯನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ, ಮೀಡಿಯಾದವರೂ ಅದನ್ನು ಎಳೆದಾಡಿಬಿಟ್ಟರು. ವೆಬ್ಸೈಟುಗಳೂ ಸೋನಂ ಬಗ್ಗೆ ಅಷ್ಟುದ್ದ ಬರೆದವು.
ಆ ಸುದ್ದಿ ಹೇಗಿತ್ತು ನೋಡಿ! 'ಕರ್ರಿ ಇನ್ ಲವ್. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ. ವಾಸುವಿನ ಮೊದಲ ಹಾಲಿವುಡ್ ಚಿತ್ರ ಇದು. ತಮಿಳಿನ ವಿಜಯ್, ಹಾಲಿವುಡ್ನ ನಿಕ್ ನೋಟ್ ಇಬ್ಬರೂ ಇಲ್ಲಿ ಹೀರೋಗಳು. ಸೋನಂ ಒಬ್ಬಳೇ ಹೀರೋಯಿನ್. ಈಕೆಯ ಅಪ್ಪನ ರೋಲ್ ಅನ್ನು ಅನಿಲ್ ಕಪೂರ್ ನಿರ್ವಹಿಸುತ್ತಿದ್ದಾರೆ'.
ಸ್ವತಃ ಸೋನಂ ಶಾಕ್!