

ಐಟಂ ಕ್ವೀನ್ಸ್ ಸನ್ನಿ, ಶೆರ್ಲಿನ್ ಬಂದ ಮೇಲೆ ಮಲ್ಲಿಕಾ ಶೆರಾವತ್ ಮುಂಬೈನಿಂದಲೇ ಓಡಿ ಹೋದಳು, ಶೆರಾವತ್ಗೆ ಅವರಷ್ಟು ಫೋಕಸ್ ಆಗೋದು ಗೊತ್ತಿಲ್ಲ... ಮುಂಬೈ ಗಲ್ಲಿ ಹೀಗೆ ಮಾತಾಡಿದ್ದೇ ಆಡಿದ್ದು. ಅದಕ್ಕೆ ತಕ್ಕನಾದ ಚಿತ್ರಗಳ ಸೆರಗನ್ನೇ ಮಲ್ಲಿಕಾ ಹಿಡಿಯುತ್ತಿರುವುದು ದುರಂತ.
ಚಿತ್ರದ ಹೆಸರು 'ಡರ್ಟಿ ಪಾಲಿಟಿಕ್ಸ್'. ಮೈತುಂಬಾ ಸೀರೆಯುಟ್ಟು, ಕೈ- ಮುಖ ಎರಡನ್ನು ಬಿಟ್ಟು ಬೇರ್ಯಾವ ಪಾರ್ಟನ್ನು ತೋರ್ಸೋದೇ ಇಲ್ಲ ಅನ್ನೋ ರೀತಿ ಇದರಲ್ಲಿ ಅಭಿನಯಿಸುತ್ತಿರುವವಳು ಮಲ್ಲಿಕಾ! 2011ರಲ್ಲಿ ಕೊಲೆಯಾದ ಭನ್ವಾರಿ ದೇವಿ ಬದುಕಿನ ಕುರಿತ ಚಿತ್ರ ಇದಾಗಿದ್ದು, ಭನ್ವಾರಿಯಾಗಿ ಮಲ್ಲಿಕಾ ಬಣ್ಣ ಹಚ್ಚುತ್ತಿದ್ದಾಳೆ. ಇದೇ ವೇಳೆ ಮಲ್ಲಿಕಾಳಿಗೆ ಹೊಟ್ಟೆ ಉರಿಸಲು ಅತ್ತ ಸನ್ನಿ, ಶೆರ್ಲಿನ್ ಬಾಲಿವುಡ್ನಲ್ಲಿ ಬಹುತೇಕ ಆಕೆಯ ಸೀಟನ್ನು ಅಲಂಕರಿಸಿದ್ದಾರೆ.
ಆದರೆ, ಇದ್ಯಾವುದರ ಬಗ್ಗೆಯೂ ಮಲ್ಲಿಕಾ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ. ಏಕೆಂದರೆ, ಈಗೀಗ ಮಲ್ಲಿಕಾ ಭಾರತದಲ್ಲೇ ಇರೋದಿಲ್ಲ. ತಿಂಗಳುಗಟ್ಟಲೆ ಯುರೋಪಿನಲ್ಲೇ ಠಿಕಾಣಿ. ಅಲ್ಲಿ ಅವಳಿಗೊಬ್ಬ ಶ್ರೀಮಂತ ಬಾಯ್ಫ್ರೆಂಡ್ ಸಿಕ್ಕಿದ್ದಾನೆ. ಫೈಸ್ಟಾರ್ ಹೋಟೆಲ್ನಲ್ಲಿ ವಸತಿ. ಎಲ್ಲೆಂದರಲ್ಲಿ ಓಡಾಡಲೊಂದು ಪ್ರೈವೆಟ್ ಜೆಟ್ಟು... ಎಲ್ಲವೂ ಸಿಕ್ಕಾಗಿದೆ. ಡೈರೆಕ್ಟರ್ ಕೆ.ಸಿ. ಬೊಕಾಡಿಯಾ ಡಿಮ್ಯಾಂಡಿಟ್ಟರು ಎನ್ನುವ ಕಾರಣಕ್ಕಾಗಿ ಮುಂಬೈಗೆ ಶೂಟಿಂಗಿಗೆ ಬಂದಿದ್ದಾಳೆ ಅನ್ನೋದು ಬಲ್ಲಮೂಲಗಳ ಮಾಹಿತಿ.
ಹಾಗಾದರೆ, ಮಲ್ಲಿಕಾ ಸೋಲುತ್ತಿದ್ದಾಳಾ?
- ಮಿಲೀ