ಛಲಗಾತಿ ಲೀಸಾ

ಆತ್ಮವಿಶ್ವಾಸ ಎಂದರೆ ಅದು. ತನ್ನನ್ನು ಬಾಧಿಸುತ್ತಿರುವ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ...
ಛಲಗಾತಿ ಲೀಸಾ
Updated on: 

ಆತ್ಮವಿಶ್ವಾಸ ಎಂದರೆ ಅದು. ತನ್ನನ್ನು ಬಾಧಿಸುತ್ತಿರುವ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಎನ್ನುವುದು ಅವಳಿಗೂ ಗೊತ್ತು. ಆದರೆ ಅದಕ್ಕೆಲ್ಲ ಎದೆಗುಂದುವ ಜಾಯಮಾನದವಳಲ್ಲ ಲೀಸಾ ರೇ. ಸೌಂದರ್ಯ ಮತ್ತು ಜೀವನೋತ್ಸಾಹದ ಖನಿಯಾಗಿರುವ ಆಕೆ ಪ್ರತಿದಿನವನ್ನೂ ಹೊಸತಾಗಿಯೇ ಕಾಣಲು ಬಯಸುವವಳು. ಕಾಯಿಲೆ ಅದರ ಪಾಡಿಗೆ ಇರುತ್ತದೆ, ತನ್ನ ಪಾಡಿಗೆ ತಾನಿರಬೇಕು ಎನ್ನುವ ನಿಲುವು ಅವಳದು. 'ನಾನು ಈಗಲೂ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನನ್ನು ಬಾಧಿಸುತ್ತಿರುವ ಮಲ್ಟಿಪಲ್ ಮೆಲೇನಿಮಾ ಎನ್ನುವ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಎನ್ನುವುದು ನನಗೂ ಗೊತ್ತು. ಆದರೆ ನಿಮ್ಮಲ್ಲಿ ಆತ್ಮವಿಶ್ವಾಸ ಇದ್ದರೆ ಮತ್ತು ಕಾಲಕಾಲಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಎಲ್ಲರಂತೆ ಬದುಕಬಹುದು ಎನ್ನುವುದಕ್ಕೆ ನಾನೇ ಜೀವಂತ ನಿದರ್ಶನ' ಎಂದು ನಗುತ್ತಲೇ ಹೇಳುತ್ತಾಳೆ ಲೀಸಾ ರೇ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com