ಬಾಲೆಗೆ ಹಾರರ್ ಇಷ್ಟ!

Updated on: 

'ಸ್ಟುಡೆಂಟ್ ಆಫ್ ದಿ ಇಯರ್‌' ಅಲಿಯಾ ಭಟ್ ಗೊತ್ತಲ್ಲ. ಅವಳಿಗೀಗ ವಿಚಿತ್ರ ಬಯಕೆ ಶುರುವಾಗಿದೆ. ಅದೇನೆಂದರೆ ಹಾರರ್ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು. 'ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಪಾತ್ರಗಳಲ್ಲಿ ನಟಿಸುವುದು ಎಂದರೆ ತುಂಬಾ ಇಷ್ಟ. ರಾಝ್, ಮರ್ಡರ್‌ನಂತಹ ಸಿನಿಮಾಗಳೆಂದರೆ ಭಾರೀ ಪ್ರೀತಿ. ಆಕಸ್ಮಾತ್ ರಾಝ್-4, ಮರ್ಡರ್-4 ಬರುತ್ತದೆ ಎಂಬ ಸುದ್ದಿ ಗೊತ್ತಾದರೆ ನಾನಾಗಿಯೇ ಹೋಗಿ ಅವಕಾಶ ಕೇಳುತ್ತೇನೆ' ಎಂದಿದ್ದಾಳೆ ಕಳೆದ ವರ್ಷವಷ್ಟೇ ಬಾಲಿವುಡ್ ಪ್ರವೇಶಿಸಿರುವ 19ರ ತರುಣಿ. 'ಮರ್ಡರ್ 3' ನಿರ್ದೇಶಕ ವಿಶೇಷ್ ಭಟ್ ಈಕೆಯ ಸಹೋದರ. ಪ್ರೇಕ್ಷಕರ ಮಧ್ಯೆ ಕುಳಿತು ಈಕೆ ಸಿನಿಮಾ ವೀಕ್ಷಿಸಿದ್ದಾಳೆ.  ಅಂದಹಾಗೆ ತನ್ನ ಮುಂದಿನ ಸಿನಿಮಾ '2 ಸ್ಟೇಟ್ಸ್‌'ನಲ್ಲಿ ಅಲಿಯಾ ಸಂಪ್ರದಾಯಸ್ಥ ತಮಿಳು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಅರ್ಜುನ್ ಕಪೂರ್ ನಾಯಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com