ಪ್ರಿನ್ಸೆಸ್ ಪ್ರಾಚಿ

Updated on: 

ಪ್ರಾಚಿ ದೇಸಾಯಿ ರಾಜಕುಮಾರಿಯಾಗಿದ್ದಾಳೆ. ಹಾಗಂತ ಶ್ವೇತವಸ್ತ್ರ ಧರಿಸಿಲ್ಲ, ರಾಜ ಮನೆತನಕ್ಕೆ ಒಪ್ಪುವ ಮೇಕಪ್ ಕೂಡ ಇಲ್ಲ. ಅಷ್ಟಕ್ಕೂ ಆಕೆ ಪ್ರಿನ್ಸೆಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಕ್ರಂ ಭಟ್ ನಿರ್ದೇಶನದ ಹಾರರ್ ಸಿನಿಮಾ '1920'ಯಲ್ಲಿ. ಲಂಡನ್‌ನಲ್ಲಿ 1920ರ ದಶಕದಲ್ಲಿ ನಡೆದ ಕಥೆ ಆಧರಿಸಿದ ಚಿತ್ರವಿದು. ಭಿನ್ನ ವೇಷಗಳಲ್ಲಿ ಪ್ರಾಚಿ ಕಾಣಿಸಿಕೊಳ್ಳಲಿದ್ದಾಳೆ. 'ಇಂತರ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಯಾರಿಗಾದರೂ ಖುಷಿ ಅಲ್ವೆ' ಅನ್ನೋದು ಅವಳ ಪ್ರತಿಕ್ರಿಯೆ. ಜಾನ್ ಅಬ್ರಹಾಂ ಜತೆಗಿನ 'ಐ, ಮಿ ಔರ್ ಮೈ'ದಲ್ಲೂ ಹೊಸಬಗೆಯ ಪಾತ್ರ. ಇಲ್ಲಾಕೆ ಕೇಶವಿನ್ಯಾಸಕಿ. 'ಈ ಸಿನಿಮಾದಲ್ಲಿ ಹೊಸ ಪ್ರಾಚಿಯನ್ನು ಕಾಣಲಿದ್ದೀರಿ' ಎನ್ನುವ ಆಕೆಗೆ ಈ ಸಿನಿಮಾ ತನ್ನ ಐದು ವರ್ಷಗಳ ಬಾಲಿವುಡ್ ಕೆರಿಯರ್‌ಗೆ ಹೊಸ ತಿರುವು ಕೊಡಲಿದೆ ಎಂಬ ತುಂಬು ವಿಶ್ವಾಸ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com