ಮೋಹಕ ಬಾಡಿ; ಮಾದಕ ಹಾಡು

Updated on: 

ಸೋನಾಲ್ ಚವ್ಹಾಣ್ ನಟನೆಯನ್ನಷ್ಟೇ ನೋಡಿದ್ದವರಿಗೆ ಈಗ ಅವಳ ಹಾಡು ಕೇಳುವ ಅವಕಾಶ. ಇದೇ ತಿಂಗಳು ತೆರೆ ಕಾಣಲಿರುವ '3ಜಿ'ಯಲ್ಲಿ ಸೋನಾಲ್ ಹಾಡೊಂದನ್ನು ಹಾಡಿದ್ದಾಳೆ. 'ಕೈಸೆ ಬತಾಂವೂ' ಎನ್ನುವ ಗೀತೆ ಆಕೆಯ ಸಿರಿಕಂಠದಲ್ಲಿ ಮೂಡಿಬಂದಿದೆ. ಸಹ ಗಾಯಕನಾಗಿ ದನಿಗೂಡಿಸಿರುವವರು ಕೆ.ಕೆ.
'ನಾನೇನೂ ವೃತ್ತಿಪರ ತರಬೇತಿ ಪಡೆದ ಗಾಯಕಿಯಲ್ಲ. ಆದರೂ ಸಂಗೀತ ನಿರ್ದೇಶಕ ಮಿಥುನ್ ನನಗೆ ಈ ಅವಕಾಶ ಕೊಟ್ಟರು. ನಾನು ಮಿಥುನ್ ಅವರ ದೊಡ್ಡ ಫ್ಯಾನ್. ಅವರ ಸಂಗೀತ ನಿರ್ದೇಶನದಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ' ಎಂದಿದ್ದಾಳೆ ಸೋನಾಲ್. ಈ ಗೀತೆ ಕೇಳುಗರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯಲಿದೆ ಎನ್ನುವುದು ಮಿಥುನ್ ಮೆಚ್ಚುಗೆ ಮಾತು.
ಈ ಪ್ರಣಯ ಗೀತೆಗಾಗಿ ನಾಯಕ ನೀಲ್ ನಿತಿನ್ ಮುಖೇಶ್ ಜತೆ ಸೋನಾಲ್ ಹೆಜ್ಜೆ ಹಾಕಿರುವ ದೃಶ್ಯಗಳನ್ನು ಫಿಜಿಯ ದ್ವೀಪಗಳಲ್ಲಿ ಮಾದಕವಾಗಿ ಚಿತ್ರಿಸಲಾಗಿದೆಯಂತೆ. ಈ ಹಾಡಿನಲ್ಲಿ ಆಕೆ ಬಿಕಿನಿಯಲ್ಲೂ ಕಾಣಿಸಿಕೊಂಡಿದ್ದಾಳೆ ಎನ್ನುವ ಸುದ್ದಿಯೇ ಅಭಿಮಾನಿಗಳ ಮೈಬಿಸಿ ಏರಿಸಿದೆಯಂತೆ. <

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com