

ತನ್ನ ಮುಂದಿನ ಸಿನಿಮಾ 'ಬ್ಯಾಂಗ್ ಬ್ಯಾಂಗ್'ನಲ್ಲಿ ಹೃತಿಕ್ ರೋಶನ್ ಜತೆ ಕಿಸ್ಸಿಂಗ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳದಿರಲು ಕತ್ರಿನಾ ಕೈಫ್ ನಿರ್ಧರಿಸಿದ್ದಾಳೆ. ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಬೇಜಾರು ಪಟ್ಟುಕೊಳ್ಳಬಹುದು ಎನ್ನುವುದು ಅವಳ ಆತಂಕ. 'ಜಬ್ ತಕ್ ಹೈ ಜಾನ್'ನಲ್ಲಿ ಶಾರೂಖ್ ಖಾನ್ ಜತೆ ಕ್ಯಾಟಿ ಸುದೀರ್ಘ ಚುಂಬನದಲ್ಲಿ ಪಾಲ್ಗೊಂಡಿದ್ದಳು. ಮುತ್ತಿಗಿಂತ ಹೆಚ್ಚಾಗಿ ಆ ದೀರ್ಘ ಸಮಯ ಸಲ್ಮಾನ್‌ನನ್ನು ಚಿಂತೆಗೀಡು ಮಾಡಿತ್ತು. ಹೇಗಾದರೂ ಮಾಡಿ ಸಲ್ಲೂ ಸಖ್ಯವನ್ನು ಮತ್ತೆ ಗಳಿಸಿಕೊಳ್ಳಬೇಕು ಎನ್ನುವುದು ಕತ್ರಿನಾ ಆಸೆ. ಅದಕ್ಕಾಗಿಯೇ ಈ ನಿಲುವು. ಅದನ್ನು ಖುದ್ದಾಗಿ ಸಲ್ಮಾನ್‌ಗೆ ತಿಳಿಸಲು ಬಹಳ ಪ್ರಯತ್ನ ಪಟ್ಟರೂ, ಸಲ್ಲೂ ಮಾತ್ರ ಅವಳಜತೆ ಮಾತನಾಡುವ ಆಸಕ್ತಿಯನ್ನೇ ತೋರಲಿಲ್ಲವಂತೆ. ಪಾಪಪಾಪ! ತ್ಯಾಗಕ್ಕೂ ಬೆಲೆ ಇಲ್ಲ ನೋಡಿ.