ಕೈಫ್ ಆಗಲ್ವಂತೆ ರಣಬೀರ್‌ನ ವೈಫ್

ಕತ್ರೀನಾ ಕೈಫ್ ಮತ್ತು ರಣಬೀರ್ ಕಪೂರ್ ಜೋಡಿ ಜೋಲಿ ಹೊಡೆದಿದೆ. 'ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ' ಅಂತ...
ಕೈಫ್ ಆಗಲ್ವಂತೆ ರಣಬೀರ್‌ನ ವೈಫ್
Updated on: 

ಕತ್ರೀನಾ ಕೈಫ್ ಮತ್ತು ರಣಬೀರ್ ಕಪೂರ್ ಜೋಡಿ ಜೋಲಿ ಹೊಡೆದಿದೆ. 'ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ' ಅಂತ ಕತ್ರೀನಾ ಬಂಧನದ ದಾರವನ್ನು ತುಂಡು ಮಾಡಿದ್ದಾಳೆ. ಇಷ್ಟಕ್ಕೂ ಆದದ್ದೇನು ಎಂದರೆ ಅದೊಂದು ಸಣ್ಣ ವಿಷಯ. 'ಏಹ್ ಜವಾನಿ ಹೈ ದೀವಾನಿ'ನಲ್ಲಿ ದೀಪಿಕಾ ಪಡುಕೋಣೆ ಜತೆ ರಣಬೀರ್ ನಟಿಸುತ್ತಿದ್ದಾನೆ. ಅದು ಕತ್ರೀನಾಗೆ ಇಷ್ಟವಾಗುತ್ತಿಲ್ಲ.' ನೀನು'ಏಕ್ ಥಾ ಟೈಗರ್‌'ನಲ್ಲಿ ಸಲ್ಮಾನ್‌ನೊಂದಿಗೆ ನಟಿಸುವಾಗ ನಾನು ಸುಮ್ಮನಿರಲಿಲ್ವ? ಏನಾದರೂ ಕ್ಯಾತೆ ತೆಗೆದಿದ್ದೆನಾ? ಸಿನಿಮಾ ಬೇರೆ, ಬದುಕು ಬೇರೆ' ಅನ್ನೋದು ರಣಬೀರ್ ವಾದ. ಅದನ್ನು ಕೈಫ್ ಒಪ್ಪುತ್ತಿಲ್ಲ. 'ಏನೇ ಆದರೂ ನೀನು ಮತ್ತೆ ದೀಪಿಕಾ ಎಂಬ ಮಾಯಾಂಗನೆಯೊಂದಿಗೆ ಕಾಣಿಸಿಕೊಳ್ಳಕೂಡದು' ಎನ್ನುವುದು ಅವರ ಹಠ. ಇಬ್ಬರ ಮುಂದಿನ ದಾರಿಯನ್ನು ಬಾಲಿವುಡ್ ಕುತೂಹಲದಿಂದ ನೋಡುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com