

ವೀಣಾ ಮಲ್ಲಿಕ್ ಮತ್ತು ರಾಜನ್ ವರ್ಮರ ರೋಮ್ಯಾನ್ಸ್ ತುಣುಕು ಎಂಎಂಎಸ್ ರೂಪದಲ್ಲಿ ಬೇಜಾನ್ ಮಂದಿಯ ಕಣ್ಣುಗಳ ಮುಂದೆ ಹರಿದಾಡುತ್ತಿತ್ತು. ವಾಸ್ತವವಾಗಿ ಅದು ಎಂಎಂಎಸ್ ಕ್ಲಿಪ್ ಅಲ್ವಂತೆ! 'ಜಿಂದಗಿ 50-50' ಸಿನಿಮಾದ ಒಂದು ದೃಶ್ಯ. 'ರೇಖಾ ಭಾರದ್ವಾಜ್ ಹಾಡಿರುವ ಮೋಹಕ ಗೀತೆಯಲ್ಲಿ ನಾನು ಹಾಗೂ ರಾಜನ್ ಪ್ರಣಯ ದೃಶ್ಯಗಳಲ್ಲಿ ನಟಿಸಿದ ವಿಡಿಯೋ ತುಣುಕುಗಳು ಅದು ಹೇಗೋ ಬಿಡುಗಡೆಯಾಗಿವೆ. ಕಲಾದೃಶ್ಯಗಳನ್ನು ವೈಯಕ್ತಿಕ ದೃಶ್ಯಗಳನ್ನಾಗಿ ಅಂದುಕೊಳ್ಳಬಾರದು. ಕಾಂಟ್ರಾವರ್ಸಿಗಳು ನನ್ನನ್ನೇ ಏಕೆ ಹಿಂಬಾಲಿಸುತ್ತವೆ?' ಎಂದೆಲ್ಲಾ ವೀಣಾ ಹಾರಾಡುತ್ತಿದ್ದಾಳೆ. ಎಂಎಂಎಸ್ ತುಣುಕು ಸಿನಿಮಾದಲ್ಲಿ ಇದೆಯಾ ಎಂಬುದೇ ಸದ್ಯಕ್ಕಿರುವ ಕುತೂಹಲ. ಯಾವುದಕ್ಕೂ ಸಿನಿಮಾ ಬಿಡುಗಡೆಯಾಗಬೇಕು. ಅದಕ್ಕೆ ಈ ತಿಂಗಳ 24ರವೆರೆಗೆ ಕಾಯಬೇಕು.