

ಮಾಡೆಲ್ ಮತ್ತು ನಟಿ ನರ್ಗಿಸ್ ಫಖ್ರಿ ಅಮೆರಿಕಕ್ಕೆ ಹೋಗುತ್ತಿದ್ದಾಳೆ. ಸೆಲೆಬ್ರಿಟಿಗಳಿಗೇನೂ ವಿದೇಶ ಪ್ರವಾಸ ಹೊಸದಲ್ಲ. ಯಾವುದೋ ಶೂಟಿಂಗ್‌ಗೊ ಅಥವಾ ವಿಶ್ರಾಂತಿ ವೇಳೆ ಕಳೆಯಲೆಂದೋ ಯುಎಸ್‌ಗೆ ಹೋಗಿರಬೇಕು ಎಂದುಕೊಳ್ಳಬೇಕು. ಫಖ್ರಿ ಈಗ ನ್ಯೂಯಾರ್ಕ್‌ಗೆ ತೆರಳುತ್ತಿರುವುದು ಕಾಲೇಜಿನಲ್ಲಿ ಪಾಠ ಮಾಡಲು! ಇಲ್ಲಿ ಒಳ್ಳೊಳ್ಳೆ ಅವಕಾಶಗಳು ಬರುತ್ತಿರುವಾಗ ಇದ್ದಕ್ಕಿದ್ದಂತೆ ಯಾಕಿಂಥ ನಿರ್ಧಾರ ಎಂದು ಅಭಿಮಾನಿಗಳು ಕಂಗಾಲಾಗಬೇಕಿಲ್ಲ. ಆಕೆ ತಾನು ಕಲಿತ ಸಿಟಿ ಯೂನಿವರ್ಸಿಟಿಯ ಕ್ವೀನ್ಸ್ ಕಾಲೇಜು ಸ್ಟೂಡೆಂಟ್ಸ್ ಜತೆ ಮನರಂಜನೆ ಉದ್ಯಮದಲ್ಲಿನ ತನ್ನ ಅನುಭವಗಳನ್ನು ಹಂಚಿಕೊಳ್ಳಲಿದ್ದಾಳೆ. ಕಾಲೇಜು ಈಕೆಗೆ 'ಪ್ರಭಾವಿ ಹಳೆ ವಿದ್ಯಾರ್ಥಿನಿ' ಎನ್ನುವ ಗೌರವ ನೀಡಿದೆ.