

ಅಕ್ಷಯ್ಕುಮಾರ್ದೊಂದು ವಿಚಿತ್ರ ಅಭ್ಯಾಸ. ಆತನೊಂದಿಗೆ ಒಂದು ಯಶಸ್ವಿ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿಗೆ ತನ್ನ ಮುಂದಿನ ಚಿತ್ರಗಳಲ್ಲೂ ಅವಕಾಶ ಕೊಡಿಸುವುದು. ಒಂದು ಹಿಟ್ ಕೊಟ್ಟರೆ ಮುಂದೆ ಏನಿಲ್ಲವೆಂದರೂ ನಾಲ್ಕೈದು ಸಿನಿಮಾಗಳಲ್ಲಿ ಆಕೆ ಅಕ್ಕಿ ಸಿನಿಮಾಗಳಲ್ಲಿ ಕಾಯಂ ನಾಯಕಿ ಎಂದೇ ಲೆಕ್ಕ. ರವೀನಾ ಟಂಡನ್ (5), ಶಿಲ್ಪಾ ಶೆಟ್ಟಿ (3), ಪ್ರಿಯಾಂಕಾ ಚೋಪ್ರಾ (4), ಟ್ವಿಂಕಲ್ ಖನ್ನಾ (2) ಅಕ್ಷಯ್ ನೆಚ್ಚಿನ ಹೀರೊಯಿನ್ಗಳ ಪಟ್ಟಿಯಲ್ಲಿದ್ದರು. ಈಗ ಸ್ಥಾನ ಪಡೆದಾಕೆ 'ದಬಾಂಗ್' ಚೆಲುವೆ ಸೋನಾಕ್ಷಿ ಸಿನ್ಹಾ. 'ರೌಡಿ ರಾಥೋಡ್'ನಿಂದ ಜತೆಯಾದ ಜೋಡಿ 'ಜೋಕರ್', 'ಒಎಂಜಿ ಓಹ್ ಮೈ ಗಾಡ್'ಗಳಲ್ಲೂ ಮುಂದುವರಿಯಿತು. ಈಗ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಮತ್ತು 'ತುಪಾಕಿ' (ರೀಮೇಕ್)ಗಳಲ್ಲೂ ಈ ನಂಟು ಮುಂದುವರಿದಿದೆ.
ಅಕ್ಕಿ ಸಿನಿಮಾಗಳಲ್ಲಿ ನಟಿಸಲು ನಾಯಕಿಯರು ಏಕೆ ಪೈಪೋಟಿ ನಡೆಸುತ್ತಾರೆ ಎನ್ನುವುದು ಅರ್ಥವಾಯಿತಲ್ಲ!