

ಕೆಲವು ಮಹಿಳಾ ಮಣಿಗಳು ಸೌಂದರ್ಯ, ಅಂಗಸೌಷ್ಠವ ಹಾಳಾಗುತ್ತದೆ ಎನ್ನುವ ಭಯದಿಂದ ಗರ್ಭ ಧರಿಸಲಿಕ್ಕೇ ಒಪ್ಪುವುದಿಲ್ಲ. 'ತಾಯ್ತನ ನಮ್ಮನ್ನು ಸದಾ ಫಿಟ್ ಆಗಿ ಇರಿಸುತ್ತದೆ' ಎನ್ನುವ ಮೂಲಕ ಸುಝಾನ್ ರೋಷನ್ ಇಂಥ ಮನೋಭಾವದವರ ಕಿವಿ ಹಿಂಡಿದ್ದಾರೆ. ಹೃತಿಕ್ ರೋಶನ್ ಪತ್ನಿಯಾಗಿರುವ ಈಕೆ, ಇಬ್ಬರು ಮಕ್ಕಳ ತಾಯಿ. ವೃತ್ತಿಯಲ್ಲಿ ಇಂಟಿರೀಯರ್ ಡಿಸೈನರ್. ಸದಾ ಬ್ಯುಸಿ. ಅದರ ನಡುವೆಯೂ ಮಕ್ಕಳು, ಮನೆ ಬಗ್ಗೆ ಕಾಳಜಿ. 'ನನ್ನ ಮಕ್ಕಳೇ ನನ್ನನ್ನು ಫಿಟ್ ಆಗಿ ಇರಿಸಿದ್ದಾರೆ. ನಾವು ಆಲಸಿಗಳಾಗಲು ಮಕ್ಕಳು ಬಿಡುವುದೇ ಇಲ್ಲ. ಹೀಗಾಗಿ ಸದಾ ಕ್ರಿಯಾಶೀಲರಾಗಿರಲು ಅವರೇ ಪ್ರೇರಣೆ' ಎನ್ನುತ್ತಾರೆ ಸುಝಾನ್.