

'ಚಿತ್ರ ನಿರ್ಮಾಣ ಮಾಡೋದು ಬಹಳ ಕಷ್ಟವಪ್ಪ' ಎನ್ನುತ್ತಿದ್ದಾಳೆ ಪ್ರೀತಿ ಝಿಂಟಾ. ತಾನೇ ನಿರ್ಮಿಸಿದ್ದಲ್ಲದೆ, ನಾಯಕಿಯಾಗಿಯೂ ನಟಿಸಿರುವ ಚಿತ್ರ 'ಇಶ್ಕ್ ಇನ್ ಪ್ಯಾರಿಸ್' ಬಿಡುಗಡೆಯಾಗಿದೆ. ನಿರ್ಮಾಪಕಿಯಾಗಿ ಪ್ರೀತಿಗೆ ಇದು ಮೊದಲ ಅನುಭವ. 'ಕೇವಲ ನಟನೆಯಾದರೆ ಯಾವುದೇ ತಲೆಬಿಸಿ ಇಲ್ಲ. ನಿರ್ದೇಶಕರು ಹೇಳಿದಂತೆ ನಟಿಸಿದರಾಯಿತು ಅಷ್ಟೆ. ಆದರೆ ಚಿತ್ರ ನಿರ್ಮಾಣ ಕೃತಜ್ಞತೆ ಇಲ್ಲದ ಕೆಲಸ. ಯಾರೊಬ್ಬರೂ ನಮ್ಮನ್ನು ಪ್ರಶಂಸಿಸುವುದಿಲ್ಲ. ತಂಡದ ಎಲ್ಲರ ಸಮಸ್ಯೆಯೂ ನಿರ್ಮಾಪಕರ ಸಮಸ್ಯೆಯೂ ಆಗಿರುತ್ತದೆ. ನಿರ್ಮಾಣ ನಿಜಕ್ಕೂ ಹೊಸ ಅನುಭವ ನೀಡಿದೆ' ಎಂದಿದ್ದಾಳೆ ಪ್ರೀತಿ.