

ಒಮ್ಮೆ 'ದೋಸ್ತಾನಾ' ಚಿತ್ರವನ್ನು ನೆನಪಿಸಿಕೊಳ್ಳಿ. ಪ್ರಿಯಾಂಕಾ ಚೋಪ್ರಾ ನೀರಲ್ಲಿ ಮುಳಗೆದ್ದು ವೈಯ್ಯಾರದಲ್ಲಿ ಹೆಜ್ಜೆಯಿಡುತ್ತಾ ಬರುತ್ತಿದ್ದರೆ, ಪ್ರೇಕ್ಷಕನ ಉಸಿರಲ್ಲೇನೋ ಏರುಪೇರಾದಂತಾಗಿತ್ತು. ಆ ವಿಡಿಯೋ ಕೂಡ ಯೂಟ್ಯೂಬ್ನಲ್ಲಿ ಭರ್ಜರಿ ರೇಟಿಂಗ್ಸ್ ಪಡೆಯಿತು. ಈಗ ಅಂಥದ್ದೇ ಸೆಕ್ಸಿ ಜನಪ್ರಿಯತೆ ಪಡೆಯಲು ಸೋನಾಕ್ಷಿ ಸಿನ್ಹಾ ಸಜ್ಜಾಗಿದ್ದಾಳೆ. ಆಕೆಯ ಮುಂದಿನ 'ಆರ್... ರಾಜ್ಕುಮಾರ್' ಎಂಬ ಚಿತ್ರದಲ್ಲಿ ಒಂದು ಬಿಕಿನಿ ದೃಶ್ಯವಿದೆಯಂತೆ. ನೀರಲ್ಲಿ ಮುಳುಗಿ, ಹಸಿಮೈಯ್ಯನ್ನು ಪ್ರೇಕ್ಷಕನಿಗೆ ತೋರಿಸುವ ಸೀನು ಈಗಾಗಲೇ ಚಿತ್ರೀಕರಣಗೊಂಡಿದೆಯಂತೆ. ಅಂದಹಾಗೆ, ಸೋನಾಕ್ಷಿ ಬಿಕಿನಿ ಧರಿಸಿರುವುದು ಇದೇ ಮೊದಲು.