

ಸೋನಂ ಕಪೂರ್ 'ಎಲ್ಲೆ' ಮೀರುತ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ನಿಗ್ಧ ಮುಖದ ಸುಂದರಿ ಈ ಪಾಟಿ ಬಿಚ್ಚಮ್ಮಳಾಗುತ್ತಾಳೆ ಎಂದರೆ ಯಾರಿಗಾದರೂ ಅಚ್ಚರಿ ಆಗುವುದು ಸಹಜ. ತನ್ನ ಸೌಂದರ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲಿ ಎಂದೇ ಇರಬೇಕು, ಅಥವಾ ತನ್ನ ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆಯೂ ಇರಬಹುದು. 'ಎಲ್ಲೆ' ಮ್ಯಾಗಜಿನ್ನಲ್ಲಿ ಸೋನಂಳ ಈ ಅವತಾರ ಪ್ರಕಟವಾಗಿದೆ. ಭಾಗ್ ಮಿಲ್ಕಾ ಭಾಗ್ ಯಶಸ್ಸಿನಿಂದ ಬೀಗುತ್ತಿರುವ ಈಕೆಯ ಕೈಯ್ಯಲ್ಲಿ ಇನ್ನೂ ಮೂರು ಚಿತ್ರಗಳಿವೆ.