

ಮದುವೆಯಾಗುವಂತೆ ಅಮ್ಮನ ಒತ್ತಾಯ. ಇನ್ನೂ ಏಳೆಂಟು ವರ್ಷ ಹಾಗೇ ಇರು ಎಂದು ಅಣ್ಣನ ಸಲಹೆ. ಅದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ನಟ ಖುನಾಲ್ ಖೇಮು ಜತೆಗಿನ ಸಾಂಗತ್ಯ ಜೀವನವನ್ನು ಆನಂದಿಸುತ್ತಿದ್ದಾಳೆ ಸೋಹಾ ಅಲಿ ಖಾನ್. ಅವಳಿಗೀಗ 32. 'ನಾನಾಗಿದ್ದರೆ ಇಷ್ಟು ಹೊತ್ತಿಗೆ ಮದುವೆಯಾಗಿ 20 ಮಕ್ಕಳನ್ನು ಹೆರುತ್ತಿದ್ದೆ' ಎಂದು ಅಮ್ಮ ಶರ್ಮಿಳಾ ಟ್ಯಾಗೋರ್ ಮದುವೆಯಾಗಲು ನಿತ್ಯವೂ ಒತ್ತಡ ಹೇರುತ್ತಿದ್ದಾಳಂತೆ. 'ಮದುವೆ ಎಂದರೆ ಮಕ್ಕಳಾಟವಲ್ಲ. 40 ವರ್ಷಕ್ಕೆ ಮದುವೆಯಾಗು. ಆಗ ನೀನು ಪ್ರಬುದ್ಧಳಾಗಿರುತ್ತೀಯಾ' ಎಂದಿದ್ದಾನಂತೆ ಅಣ್ಣ ಸೈಫ್ ಅಲಿಖಾನ್. ಮೂರು ವರ್ಷಗಳಿಂದ ಖೇಮು ಜತೆ ಸಾಂಗತ್ಯ ಜೀವನ ನಡೆಸುತ್ತಿರುವ ಸೋಹಾ ಮಾತ್ರ, 'ನಾವಿಬ್ಬರೂ ಬೇರೆಯಾಗುವುದನ್ನು ಜಗತ್ತು ಕಾಯುತ್ತಿದೆ. ಹಾಗೇನೂ ಆಗುವುದಿಲ್ಲ' ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಕಣ್ಣು ಮಿಟುಕಿಸಿದ್ದಾಳೆ.