

ಹಿಂದಿ ಕಿರುತೆರೆ ನಟಿ ರತನ್ ರಜಪೂತ್ ಅತ್ಯಂತ ಖುಷಿಯಾಗಿದ್ದಾಳೆ. ಏಕೆಂದರೆ ಕಲರ್ಸ್ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನಿಂದ ಆಕೆ ಹೊರಬಿದ್ದಿದ್ದಾಳೆ. ಇದೂ ಸಾಧ್ಯವಾ ಎಂದು ಹುಬ್ಬೇರಿಸಬೇಡಿ. 'ಬಿಗ್ ಬಾಸ್' ಮನೆಯಿಂದ ಹೊರ ಬಂದಿದ್ದಕ್ಕೆ ಬಹಳ ಖುಷಿಯಾಗಿದೆ ಎಂದು ಖುದ್ದು ಆಕೆಯೇ ಹೇಳಿಕೊಂಡಿದ್ದಾಳೆ. ಎರಡು ಸಲ ಆಕೆ ಈ ಶೋದಲ್ಲಿ ಭಾಗವಹಿಸಲು ನಿರಾಕರಿಸಿದ್ದಳಂತೆ. ಮೂರನೇ ಬಾರಿ ಯಾವುದೋ ಒತ್ತಡ, ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಿಕೊಂಡಿದ್ದಳಂತೆ. 'ಈ ರಿಯಾಲಿಟಿ ಶೋ ಕೆಟ್ಟದ್ದು ಎಂದು ಹೇಳಲಾರೆ, ಆದರೆ ನನ್ನಂಥವಳಿಗೆ ಹೊಂದಿಕೊಳ್ಳುವುದು ಕಷ್ಟ' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ ರತನ್.