

ಕರಣ್ ಮಲ್ಹೋತ್ರಾ ನಿರ್ದೇಶನದ 'ಶುದ್ಧಿ'ಯಲ್ಲಿ ಹೃತಿಕ್ ರೋಶನ್ ಮತ್ತು ಕರೀನಾ ಕಪೂರ್ ಜೋಡಿ ನಟಿಸಲಿದೆ ಎನ್ನುವ ವಾರ್ತೆ ಹಳತು. ಈ ಸಿನಿಮಾದಲ್ಲಿ ಹೃತಿಕ್ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸಮಾಚಾರ ಈಗ ಕುತೂಹಲ ಮೂಡಿಸಿದೆ. 'ನೀವು ಹಿಂದೆಂದೂ ಕಂಡಿರದ ರೀತಿಯಲ್ಲಿ ಹೃತಿಕ್ನನ್ನು ತೋರಿಸಲಿದ್ದೇನೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲಾರೆ' ಎಂದಿರುವುದು ನಿರ್ದೇಶಕ ಕರಣ್ ಮಲ್ಹೋತ್ರಾ. ಅಂದಹಾಗೆ ಇದೇ ಚಿತ್ರಕ್ಕಾಗಿ ಜೀರೋ ಸೈಜ್ ಸುಂದರಿ ಕರೀನಾ ಕಪೂರ್ ಸಿಕ್ಸ್ಪ್ಯಾಕ್ಸ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ ಎನ್ನುವುದನ್ನೂ ಕರಣ್ ಅಲ್ಲಗಳೆದಿದ್ದಾರೆ. 'ಅದರ ಅಗತ್ಯವೇ ಇಲ್ಲ. ಆಕೆ ಸಹಜ ಸುಂದರಿಯಾಗಿಯೇ ಕಾಣಿಸಿಕೊಳ್ಳಲಿದ್ದಾಳೆ' ಎನ್ನುವುದು ಅವರ ಸಮಜಾಯಿಷಿ.