

ಸಿನಿಮಾ ಮಂದಿ ಪ್ರೀತಿ, ಪ್ರೇಮ, ಪ್ರಣಯದ ವಿಚಾರದಲ್ಲಿ ಮೋಸ ಹೋಗುವುದು ಮಾಮೂಲು. ಟಾಲಿವುಡ್ನ ಮೋಹಕ 'ನಡು'ವಿನ ನಟಿ ಇಲಿಯಾನಾಗೂ ಇಂಥದ್ದೇ ಅನುಭವ ಆಗಿದೆ. ಲವ್ನಲ್ಲಿ ಬಿದ್ದು ಮೋಸ ಹೋಗಿರುವುದಾಗಿ ಆಕೆಯೇ ಹೇಳಿಕೊಂಡಿದ್ದಾಳೆ. ಇತ್ತೀಚೆಗೆ ಹಿಂದಿ ಚಿತ್ರವೊಂದರ ಪ್ರಚಾರದಲ್ಲಿ ಭಾಗವಹಿಸಿದ್ದ ಇಲಿಯಾನಾ, ಅಲ್ಲಿ ತನ್ನ ಖಾಸಗಿ ಬದುಕಿನ ದುಃಖ ತೋಡಿಕೊಂಡಿದ್ದಾಳೆ. 'ತೆಲುಗು ಚಿತ್ರರಂಗದ ಹೀರೊ ಒಬ್ಬನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಅವನೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ. ಆದರೆ, ಆತ ನನಗೆ ಮೋಸ ಮಾಡಿದ' ಎಂದು ಅಲವತ್ತುಕೊಂಡ ಆಕೆ, 'ಇನ್ನು ಮುಂದೆ ಯಾರ ಜತೆ ಹೇಗೆ ಇರಬೇಕು ಎಂದು ಪಾಠ ಕಲಿತಿದ್ದೇನೆ' ಎಂದು ನೋವಿನಿಂದ ಹೇಳಿದಳು. ಇಲಿಯಾನಾಳನ್ನು ಒಲಿಸಿಕೊಳ್ಳಲು ಕಾದಿರುವವರಂತೂ ಈ ಸುದ್ದಿ ಕೇಳಿ ಶ್ಯಾನೆ ಖುಷಿಯಾಗಿದ್ದಾರಂತೆ!