

ಹೌದು! ಇದು ಸತ್ಯ. ರಾಮ್ ಗೋಪಾಲ್ ವರ್ಮಾ ಇನ್ಮುಂದೆ ಅಂಡರ್ ವರ್ಲ್ಡ್ ಸಿನಿಮಾ ಮಾಡೋದಿಲ್ವಂತೆ! ಹಾಗಂತ ಅವರೇ ಘೋಷಿಸಿದ್ದಾರೆ. ಸದ್ಯದಲ್ಲೇ ತೆರೆ ಕಾಣಲಿರುವ ಸತ್ಯ-ಭಾಗ 2 ಚಿತ್ರವೇ ಅವರ ಕೊನೆಯ ಅಂಡರ್ವರ್ಲ್ಡ್ ಚಿತ್ರವಂತೆ. ಖುದ್ದು ಆರ್ಜಿವಿಯೇ ಇದಕ್ಕೆ ಸಮಜಾಯಿಷಿಯನ್ನೂ ನೀಡಿದ್ದಾರೆ. ಇನ್ಮುಂದೆ ಅವರು ರೊಮ್ಯಾಂಟಿಕ್ ಮೂವೀಸ್ ಮಾತ್ರ ಮಾಡ್ತಾರಂತೆ. ಹಾಗಾಗಿ, ಇದೇ (ಸತ್ಯ-2) ನನ್ನ ಕೊನೆಯ ಭೂಗತ ಜಗತ್ತಿನ ಸಬ್ಜೆಕ್ಟ್ ಇರೋ ಚಿತ್ರ ಅಂದಿದ್ದಾರೆ ಅವರು. ಆದರೆ, ಒಂದಂತೂ ಸತ್ಯ. ಅಂಡರ್ವರ್ಲ್ಡ್ ಕಥಾವಸ್ತುವುಳ್ಳ ಚಿತ್ರಗಳಿಗೆ ಹೊಸ ಸ್ಪರ್ಶ, ಹೊಸ ನಿರೂಪಣಾ ಶೈಲಿ ಕೊಟ್ಟಿದ್ದು ಇದೇ ಆರ್ಜಿವಿ. ಭಾರತದಲ್ಲಿ ಅಂಥಾ ಚಿತ್ರಗಳ ಹೊಸ ಟ್ರೆಂಡ್ ಹುಟ್ಟುಹಾಕಿದವರು ಅವರು. ಈಗ, ಅವರೇ ತಮ್ಮ ಜಾಡನ್ನು ಬಿಡುವ ಮಾತಾಡಿರೋದು ಅವರ ಶೈಲಿಯ ಚಿತ್ರಗಳನ್ನು ಮೆಚ್ಚುವ ಅನೇಕರಿಗೆ ನಿರಾಸೆ ತಂದಿರಬಹುದು.