

'ಜಾನೆ ತು ಯಾ ಜಾನೆ ನಾ' ಚೆಲುವೆ ಮಂಜರಿ ಫಡ್ನೀಸ್ಳ ಹೊಸ ಚಿತ್ರ 'ಗ್ರಾಂಡ್ ಮಸ್ತಿ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಇಂದ್ರಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಫ್ತಾಬ್ ನಾಯಕ. ಹಿಂದಿನ ಕೆಲವು ಸಿನಿಮಾಗಳಲ್ಲಿ ಪಾಶ್ಚಾತ್ಯ ಉಡುಗೆ ಧರಿಸಿ ಹಾಟ್ಹಾಟ್ ಆಗಿ ಕಾಣಿಸಿಕೊಂಡಿದ್ದ ಮಂಜರಿ ಇಲ್ಲಿ ಶುದ್ಧ ದೇಸಿ ಉಡುಪಿನಲ್ಲಿ ಮಿಂಚಲಿದ್ದಾಳೆ. ಇವಳು ಅವಳೇನಾ ಎಂದು ಪ್ರೇಕ್ಷಕರು ಕನ್ಫ್ಯೂಸ್ ಆಗುವಂಥ ದಿರಿಸು. ಇದರಲ್ಲಿ ಅಪ್ಪಟ ಪತಿವ್ರತೆ ಪಾತ್ರ. ಅಗಲವಾದ ಸಿಂಧೂರ ಇಟ್ಟುಕೊಂಡು, ಎದೆ ಮೇಲೆ ಮಂಗಲಸೂತ್ರ ಇಳಿ ಬಿಟ್ಟುಕೊಂಡು, ಚೆಂದದ ಸೀರೆ ಉಟ್ಟುಕೊಂಡು ಮಿನುಗಿದ್ದಾಳಂತೆ. 'ಇನ್ನುಮುಂದೆ ಇಂಥದ್ದೇ ಪಾತ್ರಗಳಿಗೆ ನಾನು ಬ್ರಾಂಡ್ ಆಗದಿದ್ದರೆ ಸಾಕು' ಎಂದು ಚಿತ್ರತಂಡದವರೊಂದಿಗೆ ಅಲವತ್ತುಕೊಂಡಳಂತೆ ಮಂಜರಿ.