

'ನೌಟುಂಕಿ ಸಾಲಾ'ದ ಚೆಂದುಳ್ಳಿ ಚೆಲುವೆ ಎವೆಲಿನ್ ಶರ್ಮಾ ಕಳೆದ ವರ್ಷ ಸಹಿ ಹಾಕಿದ ಸಿನಿಮಾಗಳ ಸಂಖ್ಯೆ ಐದು. ಅವುಗಳ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲೇ ಇನ್ನಷ್ಟು ಅವಕಾಶಗಳು ಅವಳನ್ನು ಹುಡುಕಿ ಬರುತ್ತಿವೆ. ಏಕ್ತಾ ಕಪೂರ್ ನಿರ್ಮಾಣದ 'ಮೈ ತೇರಾ ಹೀರೋ' ನಾಯಕಿಯರಲ್ಲಿ ಈಕೆ ಒಬ್ಬಳು. ನರ್ಗೀಸ್ ಫಕ್ರಿ ಮತ್ತು ಇಲಿಯಾನಾ ಈಕೆಯ ಜತೆ ತೆರೆ ಹಂಚಿಕೊಳ್ಳಲಿರುವ ಇನ್ನಿಬ್ಬರು ಬೆಡಗಿಯರು. ಡೇವಿಡ್ ಧವನ್ ನಿರ್ದೇಶನದ ಸಿನಿಮಾದ ನಾಯಕ ವರುಣ್ ಧವನ್. ಡೇವಿಡ್ ತನ್ನನ್ನು ಸಂಪರ್ಕಿಸಿದ ಕಾರಣದಿಂದಲೇ ಖುಷಿಗೊಂಡು ಒಪ್ಪಿಗೆ ನೀಡಿದಳಂತೆ ಹುಡುಗಿ.