

ದಕ್ಷಿಣದಿಂದ ಬಾಲಿವುಡ್ಗೆ ಹಾರಿದ ಇಲಿಯಾನಾ ಡಿ'ಕ್ರೂಜ್ಗೆ ಬಿಟೌನ್ನ ಗ್ರಾಮರ್ ಚೆನ್ನಾಗಿ ಅರ್ಥವಾಗಿದೆ. ಪ್ರತಿಭೆ ಇದ್ದರೂ ಗ್ಲಾಮರ್ ಇಲ್ಲದಿದ್ದರೆ ಅಲ್ಲಿ ಪ್ರಯೋಜನವಿಲ್ಲ ಎನ್ನುವುದನ್ನು ಆಕೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಆ ಅನುಭವದ ಹಿನ್ನೆಲೆಯಲ್ಲಿಯೇ, 'ಬಾಲಿವುಡ್ ಮತ್ತು ಗ್ಲಾಮರ್ ಎರಡೂ ಒಟ್ಟೊಟ್ಟಿಗೇ ಸಾಗುವ ಸಂಗತಿಗಳು. ಗ್ಲಾಮರ್ಗೆ ಒತ್ತು ನೀಡದಿದ್ದರೆ ಇಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಾಗಲೀ, ದೀರ್ಘಕಾಲ ನೆಲೆ ನಿಲ್ಲುವುದಾಗಲೀ ಕಷ್ಟಕಷ್ಟ' ಎಂದು ಉಸುರಿದ್ದಾಳೆ 'ಬರ್ಫಿ' ಚೆಲುವೆ.