

ಬಾಲಿವುಡ್ನಲ್ಲಿ ನಿಧಾನಕ್ಕೆ ತಳ ಊರುತ್ತಿರುವ 'ನೀಲಿ ರಾಣಿ' ಸನ್ನಿ ಲಿಯೋನ್ ಚಿತ್ರ ಬದುಕಿನ ತನ್ನ ಮಹದಾಸೆಯನ್ನು ಹೇಳಿಕೊಂಡಿದ್ದಾಳೆ. ಅವಳ ಏಕೈಕ ಕನಸು ಮತ್ತು ಗುರಿ ಎಂದರೆ ರಜನಿಕಾಂತ್ ಭೇಟಿ ಹಾಗೂ ಅವರ ಜತೆ ತೆರೆ ಮೇಲೆ ಕಾಣಿಸಿಕೊಳ್ಳುವುದು. ಅದು ಒಂದು ಕ್ಷಣದ ಸನ್ನಿವೇಶವಾದರೂ ಸೈ. ರಜನಿ ಜತೆ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳಬೇಕು ಅಷ್ಟೆ. 'ರಜನಿಕಾಂತ್ ದೊಡ್ಡ ನಟ ಎಂದು ಕೇಳಿದ್ದೇನೆ. ಅವರನ್ನು ಒಮ್ಮೆ ಭೇಟಿಯಾಗಿ ಆಶೀರ್ವಾದ ಪಡೆಯಬೇಕು. ಅವರೊಂದಿಗೆ ತೆರೆ ಹಂಚಿಕೊಳ್ಳಬೇಕು. ಪುಟ್ಟ ಪಾತ್ರವಾದರೂ ಸರಿಯೇ. ಆ ಮಹಾನ್ ಕಲಾವಿದನೊಂದಿಗೆ ನಾನು ಕಾಣಿಸಿಕೊಳ್ಳಬೇಕು' ಎಂದಿದ್ದಾಳೆ ಸನ್ನಿ.