

ಸಿನಿಮಾ ನಟ-ನಟಿಯರ ಬಗ್ಗೆ ಸದಾ ಗಾಸಿಪ್ ಹರಡುವ ಮಂದಿ ಅವರ ಸ್ನೇಹವನ್ನು ಬೇರೆ ರೀತಿಯಲ್ಲಿಯೇ ಅರ್ಥೈಸಿಕೊಳ್ತಾರೆ. ಇಲ್ಲಿ ಗಾಸಿಪ್ಗೆ ಬಲಿಯಾದವಳು ಸೋನಾಕ್ಷಿ ಸಿನ್ಹಾ. ಆಕೆ ರಾಜ್ಕುಮಾರ್ ಚಿತ್ರದಲ್ಲಿ ಶಾಹಿದ್ ಕಪೂರ್ ಜತೆ ನಟಿಸಿದ್ದಳು. ಈ ಬಗ್ಗೆ ಬಾಲಿವುಡ್ನಲ್ಲಿ ಇಲ್ಲಸಲ್ಲದ ಸಂಗತಿಗಳು ಹರಡಿದ್ದವು. ಆದರೆ 'ಅಂತಹ ಯಾವುದೇ ಸಂಗತಿಗಳು ಆಗಿಲ್ಲ. ನನಗೆ ಶಾಹಿದ್ ಜತೆ ಅಫೇರ್ ಇಲ್ಲ' ಎನ್ನುವ ಅಂಶವನ್ನು ಸೋನಾಕ್ಷಿ ಸ್ಪಷ್ಟಪಡಿಸುತ್ತಾರೆ. 'ಈ ರೀತಿ ರೂಮರ್ ಹರಡುತ್ತಿರುವುದನ್ನು ಕೇಳಿದಾಗ ಮನಸ್ಸಿಗೆ ಬೇಸರ ಆಗುತ್ತದೆ, ಇಂತಹ ಸುಳ್ಳು ಸುದ್ದಿಗಳ ಕಾರಣದಿಂದ ಪಾರ್ಟಿಗೆ ಹೋಗಲು, ಹೊರಗೆ ಓಡಾಡಲು ಹೆದರಿಕೆ ಆಗುತ್ತಿದೆ' ಎಂದಿದ್ದಾರೆ. ಶಾಹಿದ್ ಜತೆ ಆ ಚಿತ್ರದಲ್ಲಿ ನಟಿಸಿದ ಬಳಿಕ ಮಾತಾಡಿಲ್ಲ, ಮೀಟ್ ಮಾಡಿಲ್ಲ ಆದರೂ ಯಾಕೆ ಇಷ್ಟೆಲ್ಲಾ ಕಟ್ಟು ಕತೆಗಳು ಪ್ರಸಾರ ಆಗುತ್ತಿವೆಯೋ ತಿಳಿದಿಲ್ಲ ಎನ್ನುವ ಮಾತನ್ನೂ ಹೇಳಿದ್ದಾರೆ ನೊಂದಿರುವ ಸೋನಾಕ್ಷಿ. ಆಕೆಯ ಮಾತಿನಲ್ಲಿ ಸತ್ಯ ಇರಬಹುದಲ್ವಾ?