

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಸ್ಯಾಂಡಲ್ವುಡ್ ತಾರೆ ಪ್ರಣೀತಾ ಬಾಲಿವುಡ್ನಲ್ಲಿ ಬಣ್ಣ ಹಚ್ಚಬೇಕಿತ್ತು. ಬಾಲಿವುಡ್ ಮೂಲಗಳ ಪ್ರಕಾರ ನೀರಜ್ ಪಾಂಡೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಅವರು ಅಭಿನಯಿಸಬೇಕಾಗಿತ್ತು. ಆ ಚಿತ್ರದ ನಾಯಕ ಅಕ್ಷಯ್ಕುಮಾರ್ ಹಾಗೂ ನೀರಜ್ ಇಬ್ಬರೂ ಈ ಮುಂಚೆ 'ಸ್ಪೆಷಲ್ 26' ಚಿತ್ರ ಮಾಡಿ ಗೆದ್ದಿದ್ದಾರೆ. ಈ ಬಾರಿ ನಾಯಕಿ ಪಾತ್ರಕ್ಕೆ ದಕ್ಷಿಣದ ಹೊಸ ಮುಖ ಪರಿಚಯಿಸಲು ಆಡಿಷನ್ಗೆ ಕರೆಯಲಾಗಿತ್ತು. ಆದರೆ ಪ್ರಣೀತಾ ಆಡಿಷನ್ಗೆ ತಡವಾಗಿ ಬಂದರಂತೆ! ಡೈಲಾಗ್ ಡೆಲಿವರಿಯಲ್ಲೂ ಹಲವಾರು ತಪ್ಪುಗಳನ್ನು ಮಾಡಿದರಂತೆ. ಈ ಕಾರಣಕ್ಕೆ ಅವಕಾಶ ಕೈತಪ್ಪಿಹೋಯಿತು ಎನ್ನುತ್ತವೆ ಮೂಲಗಳು. ಈ ಬಗ್ಗೆ ಪ್ರಣೀತಾ ಮಾತ್ರ ಎಲ್ಲೂ ಬಾಯ್ಬಿಟ್ಟಲ್ಲ. ಆದರೆ ಸುದ್ದಿ ಹೇಗೆ ಲೀಕ್ ಆಯಿತೋ ತಿಳಿಯದು. ಮುಂದೆ ಬಾಲಿವುಡ್ನಲ್ಲಿ ಒಳ್ಳೆಯ ಪಾತ್ರ ಸಿಗಲಿ ಎಂಬುದೇ ಎಲ್ಲರ ಹಾರೈಕೆ.